ಕಿರುತೆರೆಯ ಹಾಟ್ ಜೋಡಿ ಶಿಶಿರ್ ಮತ್ತು ಐಶ್ವರ್ಯ ಅವರ ಪ್ರೀತಿಗೆ ಕೊನೆಗೂ ಮದುವೆ ಮುದ್ರೆ ಬೀಳುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ದ ಇವರಿಬ್ಬರ ಪರಿಚಯ ಇದೀಗ ದಾಂಪತ್ಯ ಜೀವನಕ್ಕೆ ಸಜ್ಜಾಗುವ ಮೂಲಕ ಹೊಸ ತಿರುವು ಪಡೆದುಕೊಂಡಿದೆ.
ಶಿಶಿರ್ ಮತ್ತು ಐಶ್ವರ್ಯ ಒಂದಾಗಬೇಕು ಎನ್ನುತ್ತಿದ್ದ ಅಭಿಮಾನಿಗಳ ಆಸೆ ಕೊನೆಗೂ ಈಡೇರಿದ್ದು, ಜೋಡಿಯು ತಮ್ಮ ಮೇಲಿದ್ದ ಎಲ್ಲಾ ಊಹಾಪೋಹಗಳಿಗೆ ಅಧಿಕೃತ ಉತ್ತರ ನೀಡುವ ಮೂಲಕ ಫುಲ್ ಸ್ಟಾಪ್ ಇಟ್ಟಿದೆ. ಯೂಟ್ಯೂಬ್ ಪ್ರವಾಸದಲ್ಲೂ ಭಾರೀ ಫೇಮಸ್ ಆಗಿರುವ ಈ ಜೋಡಿ, ತಮ್ಮ ಪ್ರೀತಿಯ ಕಥೆಗೆ ‘ಐಶಿರ್’ ಎಂದು ಹೆಸರಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಾಕುವ ಮೂಲಕ ತಮ್ಮ ಜರ್ನಿಯನ್ನ ಪ್ರೀತಿಸಿದ ಎಲ್ಲಾ ಫ್ಯಾನ್ಸ್ಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದೆ.

















