ಜನರಿಗೆ ದೀಪಾವಳಿ ಹೊತ್ತಲ್ಲಿ ಶಾಕ್ ಮೇಲೆ ಶಾಕ್ ಎದುರಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಿಕ ಇದೀಗ ಇಂದಿನಿಂದ ಸಾರಿಗೆ ಬಸ್ ಟಿಕೆಟ್ ದರ ಕೂಡ ದುಬಾರಿಯಾಗಿದೆ. ಬಿಎಂಟಿಸಿ ಶೇಕಡಾ 35 ರಷ್ಟು ಮತ್ತು ಕೆಎಸ್ಆರ್ ಟಿಸಿ ಶೇಕಡಾ 23 ರಷ್ಟು ದರ ಏರಿಕೆ ಮಾಡಿ ನಿನ್ನೆಯೇ ಸರ್ಕಾರ ಆದೇಶ ಹೊರಡಿಸಿತ್ತು.
ಇಂದಿನಿಂದ ಪ್ರಯಾಣಿಕರ ಜೇಬು ಸುಡುವುದು ಗ್ಯಾರಂಟಿಯಾಗಿದ್ದು, ಕನಿಷ್ಠ 4 ರೂಪಾಯಿಯಿಂದ ಗರಿಷ್ಠ 200 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಸಾಮಾನ್ಯ ಸಾರಿಗೆಯಲ್ಲಿ 5 ಹಂತದವರೆಗೆ ಗರಿಷ್ಠ 9 ರೂಪಾಯಿ ಹಾಗೂ ವೇಗದೂತ ಬಸ್ ನಲ್ಲಿ 10 ಹಂತದವರೆಗೆ ಗರಿಷ್ಠ 18 ರೂಪಾಯಿ ಏರಿಕೆಯಾಗಿದೆ. ಇಂದಿನಿಂದಲೇ ಅನ್ವಯವಾಗುವಂತೆ ದಿನ, ವಾರ ಹಾಗೂ ತಿಂಗಳ ಪಾಸ್ ದರವನ್ನು ಕೂಡ ಹೈಕ್ ಮಾಡಲಾಗಿದೆ.


















