ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಎಂಎಲ್ಸಿ ಸಿ.ಟಿ.ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಸ್ಟಿಂಗ್ ಆಪರೇಷನ್ ಪ್ರೊಡ್ಯೂಸರ್, ಡೈರೆಕ್ಟರ್, ಆ್ಯಕ್ಟರ್ ಎಲ್ಲವೂ ಕಾಂಗ್ರೆಸ್ನವರೇ ಇದ್ದಾರೆ, ಇದನ್ನು ಹುಡುಕಿದರೆ ಕಾಂಗ್ರೆಸ್ ಬುಡಕ್ಕೆ ಬರುತ್ತದೆ” ಎಂದು ಆರೋಪಿಸಿದ್ದಾರೆ. ತನಿಖೆಯನ್ನು ರಾಜಕೀಯವಾಗಿ ತಿರುಗಿಸಲು ಕಾಗಕ್ಕ, ಗುಬ್ಬಕ್ಕ ಕಥೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯಾರು ಅಪ್ಲೋಡ್ ಮಾಡಿದರು ಅನ್ನೋದನ್ನಷ್ಟೇ ಟಾರ್ಗೆಟ್ ಮಾಡುತ್ತಿರುವ ಇವರು, ಇದನ್ನು ಯಾರು, ಯಾಕೆ ಮತ್ತು ಯಾರ ಮೂಲಕ ಮಾಡಿಸಿದರು ಎಂಬ ಮೂಲವನ್ನು ಯಾಕೆ ಇನ್ನು ಪತ್ತೆ ಹಚ್ಚಿಲ್ಲ ಹಾಗೂ ಮಾಡಿಸಿದವರನ್ನು ಯಾಕೆ ಇನ್ನು ಅರೆಸ್ಟ್ ಮಾಡಿಸಿಲ್ಲ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

















