ಹಿರಿಯೂರು ಕ್ಷೇತ್ರದ ದಿಂಡಾವರ ಗ್ರಾಮದಲ್ಲಿ ನಿನ್ನೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ದಿವಂಗತ ಡಿ. ಸುಧಾಕರ್ ಅವರ ಪುತ್ರನಿಗೆ ಮುಂಬರುವ ಚುನಾವಣೆಗೆ ಹಿರಿಯೂರು ಟಿಕೆಟ್ ನೀಡುವ ಸ್ಪಷ್ಟ ಸುಳಿವು ನೀಡಿದ್ದಾರೆ.
“ಕನಕಪುರದಷ್ಟೇ ನನಗೆ ಹಿರಿಯೂರು ಕ್ಷೇತ್ರವೂ ಮುಖ್ಯ, ಹಾಗಾಗಿ ಇಲ್ಲೂ ನಾನೇ ಅಭ್ಯರ್ಥಿ ಎಂದು ಭಾವಿಸಿ ಕಾರ್ಯಕರ್ತರು ಕೆಲಸ ಮಾಡಿ” ಎಂದು ಡಿಕೆಶಿ ಕರೆ ನೀಡಿದ್ದಾರೆ. ಇದೇ ವೇಳೆ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸು ಮಾಡುವುದಾಗಿ ಭರವಸೆ ನೀಡಿದ್ದಾರೆ.


















