ಮುರಸು ಚಂಡಮಾರುತ 14 ವರ್ಷದಲ್ಲೇ ಪ್ರಬಲ ಚಂಡಮಾರುತ ಇದಾಗಿದ್ದು, ಅಬ್ಬರಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಬರೋಬ್ಬರಿ 344 ಕೋಟಿ ನಷ್ಟವಾಗಿದೆ.
ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಮುರಸು ಚಂಡಮಾರುತ ಭಾರಿ ನಷ್ಟವನ್ನುಂಟು ಮಾಡಿದೆ. ಸೋಮವಾರ ತಡರಾತ್ರಿ ಅಪ್ಪಳಿಸಿದ ಈ ಬಿರುಗಾಳಿ ಮಳೆಯು, ಮಂಗಳವಾರ (ನ.3) ಬೆಳಗಿನ ಜಾವ ಕರಾವಳಿ ದಾಟಿ ದುರ್ಬಲಗೊಂಡಿದೆ. ಆದರೆ ಇದರ ಪ್ರಭಾವದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

















