ತಮಿಳುನಾಡಿನ ವೆಲ್ಲೋರ್ ಸಬ್ ಡಿವಿಷನ್ ಎಸಿಪಿ ಆಗಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಐಟಿ ಕಂಪೆನಿಗಳಿಗೆ ತೆರಳಿ ಕನ್ನಡಿಗರ ಉದ್ಯೋಗದ ಮಾಹಿತಿ ಪಡೆಯುವ ಅಭಿಯಾನ ನಡೆಸುತ್ತಿದ್ದು, ಇದನ್ನು ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಟೀಕಿಸಿದ್ದಾರೆ.
“ಉದ್ಯೋಗ ಮಾಡೋ ಜನರ ಕೆಲಸಕ್ಕೆ ಅಡ್ಡಿ ಮಾಡ್ತಿರುವ ನಿರುದ್ಯೋಗಿಗಳು” ಎಂದು ಕರವೇ ಅಭಿಯಾನವನ್ನು ಅವಹೇಳನ ಮಾಡಿದ್ದು, ಅವರ ಈ ಹೇಳಿಕೆಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.



















