ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಭೀಕರ ‘ಮುರಸು’ ಸೈಕ್ಲೋನ್ ಆರ್ಭಟ ಶುರುವಾಗಿದ್ದು, ಅರ್ನಬ್ ಚಂಡಮಾರುತದ ಬೆನ್ನಲ್ಲೇ ಇದೀಗ ಆಂಧ್ರಪ್ರದೇಶಕ್ಕೆ ಮುರಸು ಸೈಕ್ಲೋನ್ ಎಂಟ್ರಿ ಕೊಡುತ್ತಿದೆ. ನೆಲ್ಲೂರು ಹಾಗೂ ನರಸಾಪುರಕ್ಕೆ ಕರಾವಳಿ ಭಾಗದ ಮೂಲಕ ಈ ರಕ್ಕಸ ಚಂಡಮಾರುತ ಅಪ್ಪಳಿಸಲಿದ್ದು, ಗಂಟೆಗೆ ಬರೋಬ್ಬರಿ 120 ಕಿಲೋಮೀಟರ್ ವೇಗದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ.
ಬಿರುಗಾಳಿಯ ಆರ್ಭಟಕ್ಕೆ ಈಗಾಗಲೇ ನೂರಾರು ಮರಗಳು ಬುಡಮೇಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶಗಳಿಂದ 30 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಚಂಡಮಾರುತದ ತೀವ್ರತೆಯಿಂದಾಗಿ ಮುನ್ನೆಚ್ಚರಿಕೆಯಾಗಿ ಸದ್ಯ ಒಟ್ಟು 19 ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.



















