ನಟ ದರ್ಶನ್ ಪುತ್ರ ವಿನೀಶ್ ದರ್ಶನ್ ಇಂದು 18ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಜೂನಿಯರ್ ದರ್ಶನ್ ಬರ್ತಡೇ ಬ್ಯಾಷ್ ಜೋರಾಗಿ ನಡೆದಿದೆ. ಇತ್ತೀಚಿನ ವಿವಾದಗಳ ನಂತರ ಮೊದಲ ಬಾರಿಗೆ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ಅವರು, ಮಗನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವನಾತ್ಮಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ವಿನೀಶ್ನನ್ನು ‘ಬಂಗಾರ’ ಎಂದು ಕರೆದಿರುವ ಅವರು, ಒಳ್ಳೆಯ ವ್ಯಕ್ತಿತ್ವ, ಧೈರ್ಯ ಮತ್ತು ಕರುಣೆ ನಿನ್ನದಾಗಲಿ ಎಂದು ಮಗನಿಗೆ ಹಾರೈಸಿದ್ದಾರೆ.
ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತೆ ಕಿವಿಮಾತು ಹೇಳಿರುವ ವಿಜಯಲಕ್ಷ್ಮಿ, ಎಂತಹ ಸಂದರ್ಭದಲ್ಲೂ ನಿನ್ನ ಒಳ್ಳೆಯ ಮನಸ್ಸನ್ನು ಮಾತ್ರ ಕಳೆದುಕೊಳ್ಳಬೇಡ ಎಂದು ಸಲಹೆ ನೀಡಿದ್ದಾರೆ. ಇನ್ನು ಅಮ್ಮನ ಈ ಪ್ರೀತಿಯ ಬರ್ತ್ಡೇ ವಿಶ್ಗೆ ಮಗ ವಿನೀಶ್ ಹಾರ್ಟ್ ಎಮೋಜಿ ಹಾಕುವ ಮೂಲಕ ಪ್ರತಿಕ್ರಿಯಿಸಿದ್ದು, ಸದ್ಯ ಅಮ್ಮ-ಮಗನ ಈ ಅಪೂರ್ವ ಬಾಂಧವ್ಯ ಎಲ್ಲರ ಗಮನ ಸೆಳೆಯುತ್ತಿದೆ.

















