ಹಾಸನದಲ್ಲಿ ಹಾಸನಾಂಬೆ ಲಾಡು ಪ್ರಸಾದವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದಕ್ಕೆ ಸಚಿವ ಶಿವಲಿಂಗೇಗೌಡ ಗರಂ ಆಗಿದ್ದಾರೆ.ಲಾಡು ಪ್ರಸಾದವನ್ನು 100 ರೂ.ಗೆ ಮಾರಾಟ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದರು. ಆದರೆ ಅಧಿಕಾರಿಗಳ ಈ ನಿರ್ಧಾರಕ್ಕೆ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೂಡಲೇ ದರ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸಚಿವರ ಮಾತಿಗೆ ಒಪ್ಪಿ 60 ರೂ.ಗೆ ಲಾಡು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಸ್ಕಾನ್ ವತಿಯಿಂದ ಲಾಡು ಪ್ರಸಾದ ತಯಾರಿಸಲಾಗುತ್ತಿದ್ದು, ಎರಡು ಲಾಡುಗೆ ತಯಾರಿಕಾ ವೆಚ್ಚವೇ ಜಿಲ್ಲಾಡಳಿತಕ್ಕೆ 57 ರೂ. ತಗುಲಿದೆ.


















