ರಾಜಧಾನಿ ಬೆಂಗಳೂರಿನಲ್ಲಿ ಜಿಬಿಎ ಕಠಿಣ ಆದೇಶವಿದ್ದರೂ ನಾಮಫಲಕಗಳ ಅಳವಡಿಕೆಯಲ್ಲಿ ತಾತ್ಸಾರ ಮುಂದುವರಿದಿದ್ದು, ಖಾಸಗಿ ಕಂಪನಿಗಳು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಲು ಹಿಂದೇಟು ಹಾಕುತ್ತಿವೆ. ಕಳೆದ ವರ್ಷ ಶೇಕಡಾ 60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಇರಬೇಕೆಂದು ಸರ್ಕಾರ ಆದೇಶಿಸಿದ್ದರೂ, ಇದನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿಲ್ಲ.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ನಾಮಫಲಕ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬಿಟಿಎಂ ಲೇಔಟ್ನಲ್ಲಿರುವ ‘ಚಾಲ್ ಪಾಯಿಂಟ್’ ಸಂಸ್ಥೆಯು ಪರಭಾಷೆ ನಾಮಫಲಕ ಹಾಕಿಕೊಂಡಿರುವುದನ್ನು ಖಂಡಿಸಿ ಕರವೇ ಸಂಘಟನೆಯ ಕಾರ್ಯಕರ್ತರು ಅದನ್ನು ತೆರವುಗೊಳಿಸಲು ಯತ್ನಿಸಿದ್ದಾರೆ! ಇದೇ ರೀತಿ ರಾಜ್ಯದ ಹಲವು ಕಡೆಗಳಲ್ಲಿ ಕನ್ನಡಪರ ಸಂಘಟನೆಗಳಿಂದ ಪರಭಾಷೆಯ ನಾಮಫಲಕಗಳ ತೆರವು ಕಾರ್ಯಾಚರಣೆ ತೀವ್ರಗೊಂಡಿದೆ!



















