ಆರೋಗ್ಯ ಸಚಿವ ಯು ಟಿ ಖಾದರ್ ಅವರು ತಡರಾತ್ರಿ 12 ಗಂಟೆಗೆ ಕಲಬುರಗಿಯ ಅಲ್ಪಸಂಖ್ಯಾತ ಇಲಾಖೆಯ ಗಂಡು ಮಕ್ಕಳ ಹಾಸ್ಟೆಲ್ಗೆ ಸರ್ಪ್ರೈಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ವಿದ್ಯಾರ್ಥಿಗಳ ರೂಮ್ಗೆ ಹೋಗಿ ಅಲ್ಲಿನ ಬೆಡ್, ಕಿಟಕಿ ಸೇರಿದಂತೆ ಹಲವು ಸೌಲಭ್ಯಗಳನ್ನು ವೀಕ್ಷಿಸಿದ ಸಚಿವರಿಗೆ ವಿದ್ಯಾರ್ಥಿಗಳು ಸಮಸ್ಯೆಗಳ ಸರಿಮಾಲೆಯನ್ನೇ ಸುರಿಸಿದ್ದಾರೆ.
ವಿದ್ಯಾರ್ಥಿಗಳು ಸಮಸ್ಯೆ ಹೇಳುತ್ತಿದ್ದಂತೆ ಹಾಸ್ಟೆಲ್ ವಾರ್ಡನ್ಗಳ ವಿರುದ್ಧ ಕೆಂಡಾಮಂಡಲವಾದ ಸಚಿವರು, ಸರ್ಕಾರ ಎಲ್ಲ ಸೌಕರ್ಯ ಕೊಟ್ಟರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಮ್ಮೆ ಈ ಅವ್ಯವಸ್ಥೆ ಮರುಕಳಿಸದಂತೆ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ ಅವರು, ಮತ್ತೆ ಅವ್ಯವಸ್ಥೆ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.



















