ಮೈಸೂರು:ಜಿಲ್ಲೆಯ ನಂಜನಗೂಡು ತಾಲೂಕಿನ ಹೆಮ್ಮರಗಾಲದ ಕರಿಶೆಟ್ಟಿ ಜಮೀನಿನಲ್ಲಿ ಭಾರಿ ಗಾತ್ರದ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದ ಹೆಮ್ಮರಗಾಲ ಮತ್ತು ಕುಂಬರಹಳ್ಳಿ ಸುತ್ತಮುತ್ತ ಆತಂಕ ಮನೆ ಮಾಡಿದ್ದು, ಹುಲಿ ಹೆಜ್ಜೆ ನೋಡಿ ರೈತರು ಕೃಷಿ ಮಾಡಲು ಹಾಗೂ ಜಾನುವಾರು ಮೇಯಿಸಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣವೇ ಹುಲಿ ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.


















