ಉಡುಪಿ : ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ವಾರಂಬಳ್ಳಿ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಹುಲಿವೇಷದ ಊದು ಪೂಜೆಯಲ್ಲಿ ವಿಜಯಪುರ ಶಾಸಕ ಯತ್ನಾಳ್ ಭಾಗಿಯಾಗಿದ್ದಾರೆ.
ಈ ವೇಳೆ ಹುಲಿ ಕುಣಿತಕ್ಕೆ ಮನಸೋತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳ ವಿಶೇಷ ಕುಣಿತವನ್ನು ಕಂಡು ಮೆಚ್ಚಿದ ಯತ್ನಾಳ್, ತಾಸೆಯ ಪೆಟ್ಟಿಗೆಗೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷಧಾರಿಗಳೊಂದಿಗೆ ಸೇರಿಕೊಂಡು ಕುಣಿದ ಯತ್ನಾಳ್ ಅವರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಹಬ್ಬದ ದಿನವೇ 3ನೇ ಮಹಡಿಯಿಂದ ಬಿದ್ದ 6 ವರ್ಷದ ಬಾಲಕ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!



















