ವಿಜಯನಗರ : ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಬಳಿ ಹೊಳೆಯಲ್ಲಿ ತೆಪ್ಪ ಮುಳುಗಿ ಮೂವರು ಮೀನುಗಾರರು ನಾಪತ್ತೆಯಾಗಿರುವ ದುರ್ಘಟನೆ ನಡೆದಿದೆ.
ಮೀನಿಗೆ ಬೆಲೆ ಹಾಕಲು ತೆರಳಿದ್ದ ವೇಳೆ ವಿಪರೀತ ಬಿರುಗಾಳಿ ಬೀಸಿದ ಪರಿಣಾಮ ತೆಪ್ಪ ಮುಳುಗಡೆಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಯಮನೂರ್ (24), ರಾಜು (27) ಹಾಗೂ ಅಜ್ಜಪ್ಪ (30) ನಾಪತ್ತೆಯಾಗಿದ್ದರು.
ನಾಪತ್ತೆಯಾದ ಮೂವರ ಪೈಕಿ ಯಮನೂರ್ (24) ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ರಾಜು ಹಾಗೂ ಅಜ್ಜಪ್ಪ ಅವರ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೊಳೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ನಾಪತ್ತೆಯಾಗಿರುವ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ : ಔಟ್ ಅಥವಾ ನಾಟ್ ಔಟ್? ಗಾಲೆ ಟೆಸ್ಟ್‌ನಲ್ಲಿ ಜುರೆಲ್ ಹಿಡಿದ ಕ್ಯಾಚ್ ಬಗ್ಗೆ ಭಾರಿ ವಿವಾದ!



















