ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆಯೊಂದನ್ನು ಘೋಷಿಸಿದೆ. ಕಂಪನಿಯು ತನ್ನ ಜನಪ್ರಿಯ 100Mbps ವೇಗದ ದೀರ್ಘಾವಧಿಯ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಮೇಲೆ ನೇರವಾಗಿ 6,000 ರೂ.ವರೆಗೆ ಭಾರೀ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ. ಜಿಯೋಫೈಬರ್ (JioFiber) ಮತ್ತು ಜಿಯೋ ಏರ್ ಫೈಬರ್ (JioAirFiber) ಗ್ರಾಹಕರಿಗಾಗಿ ಹೊಸ ‘ಫ್ರೀಡಂ ಪ್ಯಾಕ್’ ಪರಿಚಯಿಸಲಾಗಿದೆ.
ವಿಶೇಷ ಆಫರ್ ಅಡಿಯಲ್ಲಿ, 15 ತಿಂಗಳ (ಸುಮಾರು 450 ದಿನಗಳು) ವ್ಯಾಲಿಡಿಟಿ ಹೊಂದಿರುವ 100Mbps ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಈಗ ಕೇವಲ 10 ಸಾವಿರ ರೂ.ಗೆ ಲಭ್ಯವಿರಲಿದೆ. ವಾಸ್ತವವಾಗಿ ಈ ಪ್ಲ್ಯಾನ್ ಬೆಲೆ 16 ಸಾವಿರ ರೂ. ಇತ್ತು. ಈಗ ಹೊಸ ಆಫರ್ ನೀಡಿರುವುದರಿಂದ ಗ್ರಾಹಕರಿಗೆ ನೇರವಾಗಿ ರೂ. 6 ಸಾವಿರ ರೂಪಾಯಿವರೆಗೆ ಉಳಿತಾಯವಾಗಲಿದೆ. ತಿಂಗಳ ವೆಚ್ಚದ ಲೆಕ್ಕಾಚಾರದಲ್ಲಿ ನೋಡಿದರೆ, ಮೊದಲು ಇದಕ್ಕೆ ತಿಂಗಳಿಗೆ ಸುಮಾರು ರೂ. 1,066 ಖರ್ಚಾಗುತ್ತಿತ್ತು, ಆದರೆ ಈಗ ಈ ಆಫರ್ ಮೂಲಕ ಮಾಸಿಕ ವೆಚ್ಚವು ಕೇವಲ 666 ರೂ.ಗೆ ಇಳಿದಿದೆ.
ಈ ವಿಶೇಷ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ ಹೈ-ಸ್ಪೀಡ್ ಇಂಟರ್ನೆಟ್ ಸಿಗಲಿದೆ. ಇದರೊಂದಿಗೆ 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು ಹಾಗೂ ಜಿಯೋ ಹಾಟ್ಸ್ಟಾರ್, ಸೋನಿ ಲಿವ್ ಮತ್ತು ಜೀ5 ಸೇರಿದಂತೆ 12ಕ್ಕೂ ಅಧಿಕ ಜನಪ್ರಿಯ ಒಟಿಟಿ (OTT) ಪ್ಲಾಟ್ ಫಾರ್ಮ್ ಗಳ ಉಚಿತ ಸಬ್ ಸ್ಕ್ರಿಪ್ಶನ್ ಲಭ್ಯವಿರಲಿದೆ.
ಈ ಸೀಮಿತ ಅವಧಿಯ ಕೊಡುಗೆಯು ಪ್ರಸ್ತುತ ‘ಮೈ ಜಿಯೋ’ (MyJio) ಆ್ಯಪ್ ನಲ್ಲಿ ಲಭ್ಯವಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಏಕಕಾಲದಲ್ಲಿ ದೀರ್ಘಾವಧಿಯ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಮನರಂಜನೆ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಎರಡನ್ನೂ ಕಡಿಮೆ ವೆಚ್ಚದಲ್ಲಿ ಬಯಸುವ ಬಳಕೆದಾರರಿಗೆ ಇದು ಒಳ್ಳೆಯ ಆಫರ್ ಆಗಿದೆ.
ಇದನ್ನೂ ಓದಿ : ಭಾರತೀಯ ವಾಯುಪಡೆಯ ಮೊದಲ ಮಹಿಳಾ ‘ಟಾಪ್ ಗನ್’ ಪೈಲಟ್ : ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಹೊಸ ಇತಿಹಾಸ!



















