ಬೆಂಗಳೂರು : ಕೆಎಎಸ್ ಅಧಿಕಾರಿಯಾಗಬೇಕು, ಒಳ್ಳೆಯ ಆಡಳಿತ ನೀಡಬೇಕು ಎಂದು ಬಯಸುತ್ತಿರುವವರಿಗೆ ಸುವರ್ಣಾವಕಾಶ ದೊರೆತಿದೆ. ಕರ್ನಾಟಕ ಲೋಕಸೇವಾ ಆಯೋಗವು (KPSC Recruitment 2026) 319 ಕೆಎಎಸ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ
ಒಟ್ಟು ಹುದ್ದೆಗಳು: 319
ಹುದ್ದೆಗಳ ಹೆಸರು: ಕೆಎಎಸ್ ಗ್ರೂಪ್ ಎ ಹಾಗೂ ಗ್ರೂಪ್ ಬಿ ಅಧಿಕಾರಿಗಳು
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಆಗಸ್ಟ್ 31
ಗ್ರೂಪ್ ಎ ವಿಭಾಗದಲ್ಲಿ 117 ಹುದ್ದೆಗಳು ಹಾಗೂ ಗ್ರೂಪ್ ಬಿ ವಿಭಾಗದಲ್ಲಿ 202 ಹುದ್ದೆಗಳಿವೆ. ಗ್ರೂಪ್ ಎ ವಿಭಾಗದಲ್ಲಿ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ಇಸಿಒ ಸೇರಿ ಹಲವು ಹುದ್ದೆಗಳಿವೆ. ಹಾಗೆಯೇ, ಗ್ರೂಪ್ ಬಿ ವಿಭಾಗದಲ್ಲಿ ತಹಸೀಲ್ದಾರ್, ವಾಣಿಜ್ಯ ತೆರಿಗೆ ಅಧಿಕಾರಿ, ಮುಖ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳಿವೆ.
ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ತಿಳಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ 15 ರಂದು ನಡೆಸಲಾಗುತ್ತದೆ. ಮುಖ್ಯ ಪರೀಕ್ಷೆಗಳು 2027ರ ಫೆಬ್ರವರಿ 12 ರಿಂದ 18ರ ವರೆಗೆ ನಡೆಯಲಿದ್ದು, ಏಪ್ರಿಲ್ 27 ರಂದು ಮೇನ್ಸ್ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಮೇ 10ರಿಂದ 31ರವರೆಗೆ ಸಂದರ್ಶನ ನಡೆಯಲಿದೆ. ಅಂತಿಮವಾಗಿ ಜೂನ್ 5ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
ಅರ್ಜಿ ಸಲ್ಲಿಸಲು kpsc.kar.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಜನರಲ್ ಕೆಟಗರಿಯವರಿಗೆ 600 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಒಬಿಸಿಯವರಿಗೆ 300 ರೂ., ಮಾಜಿ ಸೈನಿಕರಿಗೆ 50 ರೂ. ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇದನ್ನೂ ಓದಿ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 49 ಹುದ್ದೆಗಳ ನೇಮಕಾತಿ : 2 ಲಕ್ಷ ರೂ. ಭರ್ಜರಿ ಸಂಬಳ


















