ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆಯು ತೀವ್ರ ಹೈಡ್ರಾಮಾಕ್ಕೆ ಸಾಕ್ಷಿಯಾಗಿದ್ದು, ಕೊನೆಯ ಕ್ಷಣದಲ್ಲಿ ಭಾರಿ ಟ್ವಿಸ್ಟ್ ಪಡೆದುಕೊಂಡಿದೆ.
ದೆಹಲಿಯಿಂದ ಬಿಡುಗಡೆಯಾದ ಹೈಕಮಾಂಡ್‌ನ ಸಚಿವರ ಅಧಿಕೃತ ಪಟ್ಟಿಯಲ್ಲಿ ಆರಂಭದಲ್ಲಿ ಉತ್ತರ ಕನ್ನಡದ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರ ಹೆಸರು ಪ್ರಕಟವಾಗಿತ್ತು. ಆದರೆ, ಅವರ ಹೆಸರನ್ನು ಕೈಬಿಟ್ಟು, ದಾವಣಗೆರೆ ಉತ್ತರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಹಠಾತ್ ಬದಲಾವಣೆಗೆ ಪಕ್ಷವು ತಾಂತ್ರಿಕ ಕಾರಣಗಳನ್ನು ನೀಡಿದೆ.

ಮಂಕಾಳ ವೈದ್ಯ ಅವರ ಹೆಸರು ಕೈಬಿಟ್ಟಿದ್ದಕ್ಕೆ ತೀವ್ರ ಚರ್ಚೆ ಆರಂಭವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಲಯ, ಹೈಕಮಾಂಡ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೇವಲ ಮುದ್ರಣ ದೋಷ ಉಂಟಾಗಿತ್ತು ಎಂದು ಸಮರ್ಥಿಸಿಕೊಂಡಿದೆ.
ಹೈಕಮಾಂಡ್ ಮೊದಲಿನಿಂದಲೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನೇ ಅಂತಿಮಗೊಳಿಸಿತ್ತು, ಆದರೆ ಪಟ್ಟಿ ಸಿದ್ಧಪಡಿಸುವಾಗ ಮಂಕಾಳ ವೈದ್ಯ ಅವರ ಹೆಸರು ತಪ್ಪಾಗಿ ಒಳಗೊಂಡಿತ್ತು ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಇಲ್ಲಿದೆ ಡಿಕೆಶಿ ಸಂಪುಟ ಸೇರಿದ ನೂತನ ಸಚಿವರ ಪಟ್ಟಿ.. ಇಂದು ಸಂಜೆಯೇ ಪದಗ್ರಹಣ!


















