ಬೆಂಗಳೂರು : ದೇಶಾದ್ಯಂತ ಇರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ (AIIMS Recruitment 2026) ಖಾಲಿ ಇರುವ 2,218 ನರ್ಸಿಂಗ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆಸ್ಪತ್ರೆಗಳ ಸಮೂಹದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನೇಮಕಾತಿ ಸಂಸ್ಥೆ: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS)
ಒಟ್ಟು ಹುದ್ದೆಗಳು: 2,218
ಹುದ್ದೆಗಳ ಹೆಸರು: ನರ್ಸಿಂಗ್ ಆಫೀಸರ್
ಉದ್ಯೋಗ ಸ್ಥಳ: ದೇಶಾದ್ಯಂತ ಇರುವ ಏಮ್ಸ್ ಆಸ್ಪತ್ರೆಗಳು
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಆಗಸ್ಟ್ 13
ನವದೆಹಲಿ, ಒಡಿಶಾದ ಭುವನೇಶ್ವರ, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶದ ರಾಯ್ ಬರೇಲಿ ಸೇರಿ ಹಲವೆಡೆ ಇರುವ ಏಮ್ಸ್ ಆಸ್ಪತ್ರೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೋಮಾ, ಬಿಎಸ್ಸಿ ಹಾಗೂ ಜಿಎನ್ಎಂ ಕೋರ್ಸ್ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
ಒಬಿಸಿ ಸಮುದಾಯದವರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇದ್ದರೆ, ಎಸ್ಸಿ, ಎಸ್ಟಿಯವರಿಗೆ 5 ವರ್ಷಗಳ ಸಡಿಲಿಕೆ ಇದೆ. ಜನರಲ್ ಹಾಗೂ ಒಬಿಸಿ ಸಮುದಾಯದವರಿಗೆ 3 ಸಾವಿರ ರೂಪಾಯಿ ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿಯವರಿಗೆ 2,400 ರೂಪಾಯಿ ಶುಲ್ಕವಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 9,300-34,800 ರೂಪಾಯಿ ಸಂಬಳ ನೀಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು aiimsexams.ac.in ಗೆ ಭೇಟಿ ನೀಡಬಹುದು.
ಇದನ್ನೂ ಓದಿ : ಬಡ ವಿದ್ಯಾರ್ಥಿಗಳಿಗೆ ಬಂಪರ್ : 15 ಲಕ್ಷ ರೂ. ಸ್ಕಾಲರ್‌ಶಿಪ್ ಘೋಷಿಸಿದ SBI



















