ಬೆಂಗಳೂರು : ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೈರತಿ ಬಂಡೆ ಗ್ರಾಮದಲ್ಲಿ 40 ವರ್ಷಗಳಿಂದ ಅಪಾಯಕಾರಿಯಾಗಿ ನಿಂತಿದ್ದ ‘ಕಿಲ್ಲರ್ ನೀರಿನ ಟ್ಯಾಂಕ್’ ತೆರವಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಜೀವಭಯದಲ್ಲಿದ್ದ ಸ್ಥಳೀಯ ನಿವಾಸಿಗಳಿಗೆ ಇದೀಗ ನೆಮ್ಮದಿಯ ಉಸಿರು ಸಿಕ್ಕಂತಗಿದೆ.

ಕರ್ನಾಟಕ ನ್ಯೂಸ್ ಬೀಟ್ ವರದಿ ಪ್ರಸಾರವಾದ ಬೆನ್ನಲ್ಲೇ ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಟ್ಯಾಂಕ್ ತೆರವಿಗೆ ಅಧಿಕಾರಿಗಳು ತುರ್ತು ಕಾರ್ಯಾಚರಣೆ ಆರಂಭಿಸಿದ್ದಾರೆ.

BESCOM, BWSSB, GBA ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈರತಿ ಬಂಡೆ ವಾರ್ಡ್‌ನ EE ರವಿ ಅವರ ನೇತೃತ್ವದಲ್ಲಿ ಜೆಸಿಬಿ ಮತ್ತು ಕ್ರೇನ್‌ಗಳ ಮೂಲಕ ಅಪಾಯಕಾರಿ ಟ್ಯಾಂಕ್ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಹಲವು ವರ್ಷಗಳಿಂದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಈ ಟ್ಯಾಂಕ್‌ನ್ನು ತೆರವುಗೊಳಿಸಿದ ಬಳಿಕ, ಅದೇ ಸ್ಥಳದಲ್ಲಿ RO ಪ್ಲಾಂಟ್ ನಿರ್ಮಿಸಲು ಕೂಡ ನಿರ್ಧರಿಸಲಾಗಿದೆ.
ಇದರ ಜೊತೆಗೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ಕಂಬಗಳಿಗೆ ಹೊಸ ಬೆಳಕಿನ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಕತ್ತಲಿನಿಂದಾಗಿ ಸ್ಥಳೀಯರಿಗೆ ಎದುರಾಗುತ್ತಿದ್ದ ಸಮಸ್ಯೆ ನಿವಾರಿಸಲು ಹೊಸ ಬಲ್ಬ್‌ಗಳನ್ನು ಅಳವಡಿಸಲಾಗುತ್ತಿದೆ. ಕರ್ನಾಟಕ ನ್ಯೂಸ್ ಬೀಟ್ ವರದಿ ಪ್ರಸಾರವಾದ ಬಳಿಕ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಕ್ಕೆ ಸ್ಥಳೀಯ ಕುಟುಂಬಗಳು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಭಟ್ಕಳದಲ್ಲಿ ‘ಕೆಸರಂಗ್–2’ ಅದ್ಧೂರಿ ಆಚರಣೆ.. ಕೆಸರುಗದ್ದೆಗೆ ಇಳಿದು ಸಂಭ್ರಮಿಸಿದ ಗ್ರಾಮಸ್ಥರು!



















