ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ಐಷಾರಾಮಿ ಕಾರುಗಳಿಗೆ E20 ಪೆಟ್ರೋಲ್ ಕಂಟಕ? ಬೆಂಜ್, BMW ವಾಹನಗಳನ್ನೇ ಹಾಳು ಮಾಡ್ತಿದೆ ಎಥೆನಾಲ್ ಇಂಧನ!

July 22, 2026
Share on WhatsappShare on FacebookShare on Twitter

ಬೆಂಗಳೂರು : ಕೇಂದ್ರ ಸರ್ಕಾರ ಪರಿಸರಸ್ನೇಹಿ ಹಾಗೂ ಇಂಧನ ಆಮದು ವೆಚ್ಚ ತಗ್ಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಇಪ್ಪತ್ತು ಪ್ರತಿಶತ ಎಥೆನಾಲ್ ಮಿಶ್ರಿತ ‘E20 ಪೆಟ್ರೋಲ್’ ವಾಹನ ಸವಾರರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆಯೇ ಎಂಬ ಅನುಮಾನಗಳು ದಿನದಿಂದ ದಿನಕ್ಕೆ ಬಲವಾಗುತ್ತಿವೆ.

ಸರ್ಕಾರ ಮತ್ತು ವಾಹನ ತಯಾರಕ ಕಂಪನಿಗಳು E20 ಇಂಧನದಿಂದ ವಾಹನಗಳಿಗೆ ಯಾವುದೇ ರೀತಿ ಹಾನಿಯಿಲ್ಲ ಎಂದು ಪದೇ ಪದೇ ಭರವಸೆ ನೀಡುತ್ತಿದ್ದರೂ, ವಾಸ್ತವದಲ್ಲಿ ವಾಹನಗಳ ಮಾಲೀಕರಿಗೆ ಹಾಗೂ ಸ್ವತಂತ್ರ ಮೆಕ್ಯಾನಿಕ್‌ಗಳ ಅನುಭವ ಸಂಪೂರ್ಣ ಭಿನ್ನವಾಗಿದೆ. ಇದೀಗ ದುಬಾರಿ ಕಾರುಗಳ ದುರಸ್ತಿಯಲ್ಲಿ ಪರಿಣತಿ ಹೊಂದಿರುವ ಮೆಕ್ಯಾನಿಕ್ ಒಬ್ಬರು E20 ಪೆಟ್ರೋಲ್‌ನಿಂದಾಗಿ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ ಹಾಗೂ ಲ್ಯಾಂಡ್ ರೋವರ್ ಡಿಫೆಂಡರ್‌ನಂತಹ ಐಷಾರಾಮಿ ಕಾರುಗಳ ಫ್ಯೂಯಲ್ ಪಂಪ್‌ಗಳು ಬಹುಬೇಗನೆ ಹಾಳಾಗುತ್ತಿವೆ ಎಂಬ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನೂರಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಫ್ಯೂಯಲ್ ಪಂಪ್ ವೈಫಲ್ಯ

‘ದ ರೆಡ್‌ಮೈಕ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೋವೊಂದರಲ್ಲಿ ಪ್ರೀಮಿಯಂ ಕಾರುಗಳ ಮೆಕ್ಯಾನಿಕ್ ವಾಸ್ತವದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಎರಡು-ಮೂರು ತಿಂಗಳ ಅವಧಿಯಲ್ಲಿಯೇ ನೂರಕ್ಕೂ ಹೆಚ್ಚು ಬಿಎಂಡಬ್ಲ್ಯೂ ಹಾಗೂ ಡಿಫೆಂಡರ್ ಕಾರುಗಳ ಫ್ಯೂಯಲ್ ಪಂಪ್ ಬದಲಾಯಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸಮಸ್ಯೆಯು ಕೇವಲ ಸಾಮಾನ್ಯ ಕಾರುಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರುಗಳಿಗೂ ಇದರ ಬಿಸಿ ತಟ್ಟಿದೆ.

ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲೂ ಬಿಡಿಭಾಗಗಳ ಬದಲಾವಣೆಗಾಗಿ ಬಂದಿರುವ ಇಂತಹ ಹಾಳಾದ ವಾಹನಗಳ ಫ್ಯೂಯಲ್ ಪಂಪ್‌ಗಳು ಗುಡ್ಡೆ ಬಿದ್ದಿವೆ ಎಂದು ಅವರು ವಿವರಿಸಿದ್ದಾರೆ. ವಾಹನದ ಇಂಧನದ ಟ್ಯಾಂಕ್‌ನೊಳಗೆ ಅಳವಡಿಸಲಾಗುವ ಈ ಫ್ಯೂಯಲ್ ಪಂಪ್‌ಗಳು, ಟ್ಯಾಂಕ್‌ನಿಂದ ಇಂಜಿನ್‌ಗೆ ಇಂಧನವನ್ನು ಸರಬರಾಜು ಮಾಡುವ ಪ್ರಮುಖ ಕಾರ್ಯ ನಿರ್ವಹಿಸುತ್ತವೆ. ಇದು ಹಾಳಾದರೆ ಇಡೀ ವಾಹನದ ಚಲನೆಯೇ ಸಂಪೂರ್ಣವಾಗಿ ಸ್ತಬ್ಧಗೊಳ್ಳುತ್ತದೆ.

ಗ್ರಾಹಕರ ಜೇಬಿಗೆ ಕತ್ತರಿ ಮತ್ತು ತಾಂತ್ರಿಕ ದೋಷದ ಅಸಲಿಯತ್ತು

ವೀಡಿಯೋದಲ್ಲಿ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಕಾರಿನ ಹಾಳಾದ ಫ್ಯೂಯಲ್ ಪಂಪ್ ಹಾಗೂ ಇಂಜೆಕ್ಟರ್‌ಗಳನ್ನು ತೋರಿಸಿರುವ ಮೆಕ್ಯಾನಿಕ್, ಬಿಡಿಭಾಗಗಳ ವೈಫಲ್ಯದ ಹಿಂದಿನ ತಾಂತ್ರಿಕ ಕಾರಣಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. E20 ಪೆಟ್ರೋಲ್ ಬಳಕೆಯಿಂದಾಗಿ ಫ್ಯೂಯಲ್ ಪಂಪ್‌‌ನೊಳಗಿರುವ ಸ್ಟ್ರೈನರ್ (ಜರಡಿ) ಬೇಗನೆ ಬ್ಲಾಕ್ ಆಗುತ್ತದೆ. ಇದರಿಂದಾಗಿ ಪಂಪ್‌ನೊಳಗಿನ ಎಲೆಕ್ಟ್ರಿಕ್ ಮೋಟಾರ್ ಹೆಚ್ಚು ಒತ್ತಡಕ್ಕೆ ಸಿಲುಕಿ ವೈಫಲ್ಯ ಕಾಣುತ್ತದೆ. ಇದೇ ಕಾರಣದಿಂದ ಫ್ಯೂಯಲ್ ಪಂಪ್ ಕಳಪೆಯಾಗುತ್ತದೆ.

ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಕಾರಿನ ಮಾಲೀಕರಿಗೆ ಇದೇ ಸಮಸ್ಯೆಯಿಂದಾಗಿ ಅಧಿಕೃತ ಸರ್ವಿಸ್ ಸೆಂಟರ್ ಸುಮಾರು ಎರಡುವರೆ ಲಕ್ಷ ರೂಪಾಯಿ ದುರಸ್ತಿಯ ಬಿಲ್ ನೀಡಿತ್ತಂತೆ. ಆದರೆ, ತಮ್ಮ ಸ್ವತಂತ್ರ ಗ್ಯಾರೇಜ್‌ನಲ್ಲಿ ಹಳೆಯ (ಸೆಕೆಂಡ್-ಹ್ಯಾಂಡ್) ಭಾಗಗಳನ್ನು ಬಳಸಿ ಕೇವಲ ಒಂದು ಲಕ್ಷ ರೂಪಾಯಿಗೆ ಇದನ್ನು ಸರಿಪಡಿಸಿಕೊಟ್ಟಿರುವುದಾಗಿ ಅವರು ಹೇಳಿದ್ದಾರೆ. ಇದೇ ವಿಚಾರವಾಗಿ ಬಿಎಂಡಬ್ಲ್ಯೂ ಕಂಪನಿಯು ಕೂಡ ಈ ಹಿಂದೆ ಸಂಶೋಧನೆ ನಡೆಸಿದ್ದು, ಸ್ಟ್ರೈನರ್ ಬ್ಲಾಕ್ ಆಗುವುದೇ ಫ್ಯೂಯಲ್ ಪಂಪ್ ವೈಫಲ್ಯಕ್ಕೆ ಮುಖ್ಯ ಕಾರಣ ಎಂಬುದನ್ನು ಕಂಡುಕೊಂಡಿದೆ ಎಂದೂ ಮೆಕ್ಯಾನಿಕ್ ಪ್ರತಿಪಾದಿಸಿದ್ದಾರೆ.

ಟೊಯೋಟಾ ಕ್ಯಾಮ್ರಿಗೂ ತಟ್ಟಿದ ಬಿಸಿ, ನಟರ ಆಕ್ರೋಶ

E20 ಇಂಧನದಿಂದ ಕೇವಲ ಜರ್ಮನ್ ಕಾರುಗಳು ಮಾತ್ರವಲ್ಲ, ಜಪಾನ್ ಮೂಲದ ವಿಶ್ವಾಸಾರ್ಹ ವಾಹನಗಳಿಗೂ ಸಂಕಷ್ಟ ತಪ್ಪಿಲ್ಲ ಎಂಬುದಕ್ಕೆ ಇತ್ತೀಚಿನ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಟಾಲಿವುಡ್ ನಟ ಹಾಗೂ ಮಾಜಿ ಬಿಜೆಪಿ ನಾಯಕ ನರೇಶ್ ವಿಜಯ ಕೃಷ್ಣ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಆಪ್ತಸ್ನೇಹಿತರೊಬ್ಬರ ಅತ್ಯಂತ ದುಬಾರಿ ಟೊಯೋಟಾ ಕ್ಯಾಮ್ರಿ ಕಾರು E20 ಪೆಟ್ರೋಲ್‌ನಿಂದಾಗಿ ತೀವ್ರ ದುರಸ್ತಿಗೆ ಬಂದಿದ್ದು, ಇದನ್ನು ಸರಿಪಡಿಸಲು ಬರೋಬ್ಬರಿ ೩.೫ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ನಟ ಹೇಳಿಕೊಂಡಿದ್ದಾರೆ. ಸರ್ಕಾರದ ಎಥೆನಾಲ್ ಮಿಶ್ರಣ ನೀತಿಯನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಅವಸರದಲ್ಲಿ ಜಾರಿಗೊಳಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ತನ್ನ ನೀತಿಯನ್ನು ಪರಿಷ್ಕರಿಸಿಕೊಳ್ಳದಿದ್ದರೆ ಮುಂಬರುವ ಚುನಾವಣೆಗಳಲ್ಲಿ ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದ ಆತಂಕ, ವಾಹನ ಸವಾರರಿಗೆ ಆರ್ಥಿಕ ಹೊರೆ

ಮೆಕ್ಯಾನಿಕ್ ತಿಳಿಸಿರುವ ಈ ಮಾಹಿತಿಯು ಅವರ ವೈಯಕ್ತಿಕ ಅನುಭವಗಳನ್ನು ಮಾತ್ರ ಆಧರಿಸಿದ್ದರೂ, ವಾಹನ ಸವಾರರು ಎದುರಿಸುತ್ತಿರುವ ದೈನಂದಿನ ಸಂಕಷ್ಟಗಳ ನೈಜ ಚಿತ್ರಣವನ್ನು ಇದು ತೆರೆದಿಡುತ್ತಿದೆ. ಹೊಸ ಕಾರುಗಳನ್ನು ಖರೀದಿಸಿದ ಗ್ರಾಹಕರು ಇಂತಹ ಅನಿರೀಕ್ಷಿತ ದುರಸ್ತಿ ವೆಚ್ಚಗಳ ಭೀತಿಯಲ್ಲಿ ವಾಹನ ಬೀದಿಗಿಳಿಸುವಂತಾಗಿದೆ.

ಕೆಲವು ಗ್ರಾಹಕರು ತಮ್ಮ ವಾಹನಗಳು ವಾರಂಟಿ ಅಡಿಯಲ್ಲಿ ಇರುವುದರಿಂದ ಫ್ಯೂಯಲ್ ಪಂಪ್‌ಗಳನ್ನು ಉಚಿತವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಆದರೆ, ವಾರಂಟಿ ಮುಗಿದ ವಾಹನಗಳ ಮಾಲೀಕರಿಗೆ ಇದು ಭಾರಿ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. E20 ಇಂಧನದ ಅಡ್ಡಪರಿಣಾಮಗಳ ಬಗ್ಗೆ ವಾಹನ ತಯಾರಕರು ಹಾಗೂ ಸರ್ಕಾರ ಸೂಕ್ತ ವೈಜ್ಞಾನಿಕ ಪರಿಹಾರ ಮತ್ತು ಸ್ಪಷ್ಟನೆಯನ್ನು ಜನಸಾಮಾನ್ಯರಿಗೆ ಒದಗಿಸದೆ ಹೋದರೆ, ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮತ್ತಷ್ಟು ಹೆಚ್ಚುವ ಹಾಗೂ ವಾಹನ ಪ್ರಿಯರ ಆಕ್ರೋಶ ಭುಗಿಲೇಳುವ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ : ಹೂಡಿಕೆ ಮೇಲಿನ ಲಾಭಕ್ಕೆ ತೆರಿಗೆಯೇ ಇರುವುದಿಲ್ಲವೇ? ಕೇಂದ್ರದಿಂದ ಮಹತ್ವದ ಸ್ಪಷ್ಟನೆ!

Tags: Auto NewsAutomobile IndustryBMW CarsE20 PetrolEthanol FuelFuel CompatibilityKarnataka News beatKNBluxury carsMercedes BenzPremium Vehicles
SendShareTweet
Previous Post

ತಮ್ಮನ ನೆನಪಿನಲ್ಲಿ ಅಣ್ಣ ಆತ್ಮಹತ್ಯೆ.. ಮದ್ಯದಲ್ಲಿ ಇಂಕ್ ಬೆರೆಸಿ ಕುಡಿದು ಯುವಕ ಸಾವು!

Next Post

ಟಿ20 ಸರಣಿ ವೈಫಲ್ಯಕ್ಕೆ ಏಷ್ಯಾದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದೇ ಪ್ರಮುಖ ಕಾರಣ : ತಿಲಕ್ ವರ್ಮಾ

Related Posts

ವೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭರ್ಜರಿ ಆಫರ್‌ ; ಟೈಗನ್, ಟಿಗುವಾನ್‌ಗೆ 6 ಲಕ್ಷ ರೂಪಾಯಿ ವರೆಗೆ ಲಾಭ!
ವ್ಯಾಪಾರ

ವೋಕ್ಸ್‌ವ್ಯಾಗನ್ ಕಾರುಗಳ ಮೇಲೆ ಭರ್ಜರಿ ಆಫರ್‌ ; ಟೈಗನ್, ಟಿಗುವಾನ್‌ಗೆ 6 ಲಕ್ಷ ರೂಪಾಯಿ ವರೆಗೆ ಲಾಭ!

Mivi One 5G ಬಿಡುಗಡೆಗೆ ದಿನಾಂಕ ನಿಗದಿ ; ಸೆ. 24ಕ್ಕೆ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!
ವ್ಯಾಪಾರ

Mivi One 5G ಬಿಡುಗಡೆಗೆ ದಿನಾಂಕ ನಿಗದಿ ; ಸೆ. 24ಕ್ಕೆ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಲಾಂಚ್!

ರೆನೋ ಟ್ರೈಬರ್‌ಗೆ ಬರಲಿದೆ ಭರ್ಜರಿ ಟರ್ಬೊ ಪವರ್ ; 100 PS ಎಂಜಿನ್‌ ಸೆಪ್ಟೆಂಬರ್‌ನಲ್ಲೇ ಬಿಡುಗಡೆ!
ವ್ಯಾಪಾರ

ರೆನೋ ಟ್ರೈಬರ್‌ಗೆ ಬರಲಿದೆ ಭರ್ಜರಿ ಟರ್ಬೊ ಪವರ್ ; 100 PS ಎಂಜಿನ್‌ ಸೆಪ್ಟೆಂಬರ್‌ನಲ್ಲೇ ಬಿಡುಗಡೆ!

ಭಾರತದಲ್ಲಿ ಸ್ಯಾಮ್‌ಸಂಗ್‌ ಫೋನ್‌ಗಳ ಬೆಲೆ ಏರಿಕೆ ; A17, A27, F17, A07 5G ಗ್ರಾಹಕರಿಗೆ ಶಾಕ್!
ವ್ಯಾಪಾರ

ಭಾರತದಲ್ಲಿ ಸ್ಯಾಮ್‌ಸಂಗ್‌ ಫೋನ್‌ಗಳ ಬೆಲೆ ಏರಿಕೆ ; A17, A27, F17, A07 5G ಗ್ರಾಹಕರಿಗೆ ಶಾಕ್!

2028ರ ವೇಳೆಗೆ 2,000 ಮಳಿಗೆಗಳ ಗುರಿ : ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಭರ್ಜರಿ ವಿಸ್ತರಣೆಗೆ ಏಥರ್‌ ಸಜ್ಜು!
ವ್ಯಾಪಾರ

2028ರ ವೇಳೆಗೆ 2,000 ಮಳಿಗೆಗಳ ಗುರಿ : ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಭರ್ಜರಿ ವಿಸ್ತರಣೆಗೆ ಏಥರ್‌ ಸಜ್ಜು!

ಟಾಟಾ ಮೋಟಾರ್ಸ್‌ ಭರ್ಜರಿ ದಾಖಲೆ : ಕಾರು ಮಾರಾಟ ಶೇ.59ರಷ್ಟು ಏರಿಕೆ!
ವ್ಯಾಪಾರ

ಟಾಟಾ ಮೋಟಾರ್ಸ್‌ ಭರ್ಜರಿ ದಾಖಲೆ : ಕಾರು ಮಾರಾಟ ಶೇ.59ರಷ್ಟು ಏರಿಕೆ!

Next Post
ಟಿ20 ಸರಣಿ ವೈಫಲ್ಯಕ್ಕೆ ಏಷ್ಯಾದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದೇ ಪ್ರಮುಖ ಕಾರಣ : ತಿಲಕ್ ವರ್ಮಾ

ಟಿ20 ಸರಣಿ ವೈಫಲ್ಯಕ್ಕೆ ಏಷ್ಯಾದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದೇ ಪ್ರಮುಖ ಕಾರಣ : ತಿಲಕ್ ವರ್ಮಾ

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗಾಯಗಳ ಸರಮಾಲೆಗೆ BCCI ಶಾಕ್ ; ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಫಿಸಿಯೊ ಕಮಲೇಶ್ ಜೈನ್ ವಜಾ

ಗಾಯಗಳ ಸರಮಾಲೆಗೆ BCCI ಶಾಕ್ ; ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಫಿಸಿಯೊ ಕಮಲೇಶ್ ಜೈನ್ ವಜಾ

ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ : ಆರೋಪಿ ಬಂಧನ

ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ : ಆರೋಪಿ ಬಂಧನ

ಸ್ನಾತಕೋತ್ತರ ಪದವಿ ಮುಗಿಸಿದವರಿಗೆ NCBS ಸಂಸ್ಥೆಯಲ್ಲಿ ಉದ್ಯೋಗಾವಕಾಶ : ಹೀಗೆ ಅರ್ಜಿ ಸಲ್ಲಿಸಿ

ಸ್ನಾತಕೋತ್ತರ ಪದವಿ ಮುಗಿಸಿದವರಿಗೆ NCBS ಸಂಸ್ಥೆಯಲ್ಲಿ ಉದ್ಯೋಗಾವಕಾಶ : ಹೀಗೆ ಅರ್ಜಿ ಸಲ್ಲಿಸಿ

ದೆಹಲಿಯಲ್ಲಿ ವೈದ್ಯಕೀಯ ಪವಾಡ : ಫಲವತ್ತತೆ ಪರೀಕ್ಷೆಗೆ ತೆರಳಿದ್ದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ!

ದೆಹಲಿಯಲ್ಲಿ ವೈದ್ಯಕೀಯ ಪವಾಡ : ಫಲವತ್ತತೆ ಪರೀಕ್ಷೆಗೆ ತೆರಳಿದ್ದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗಾಯಗಳ ಸರಮಾಲೆಗೆ BCCI ಶಾಕ್ ; ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಫಿಸಿಯೊ ಕಮಲೇಶ್ ಜೈನ್ ವಜಾ

ಗಾಯಗಳ ಸರಮಾಲೆಗೆ BCCI ಶಾಕ್ ; ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಫಿಸಿಯೊ ಕಮಲೇಶ್ ಜೈನ್ ವಜಾ

ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ : ಆರೋಪಿ ಬಂಧನ

ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ : ಆರೋಪಿ ಬಂಧನ

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat