ಬೆಂಗಳೂರು : ಯಕ್ಷಗಾನ ಅಭಿಮಾನಿಗಳಿಗಾಗಿ ಇದೇ ಜುಲೈ 25ರಂದು (ಶನಿವಾರ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 9.30ರಿಂದ ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ‘ಪೂರ್ಣ ರಾತ್ರಿ ತಾಳಮದ್ದಳೆ’ ನಡೆಯಲಿದ್ದು, ‘ವಾಲಿ ವಧೆ’ ಮತ್ತು ‘ಭೃಗು ಶಾಪ’ ಎಂಬ ಎರಡು ಪ್ರಸಿದ್ಧ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.
‘ವಾಲಿ ವಧೆ’ ಮತ್ತು ‘ಭೃಗು ಶಾಪ’ ಎರಡೂ ಪ್ರಸಂಗಗಳ ಹಿಮ್ಮೇಳದಲ್ಲಿ ಖ್ಯಾತ ಯಕ್ಷಗಾನ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆ ವಾದಕರಾದ ಎ.ಪಿ. ಪಾಠಕ್, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ, ಪ್ರತಿಭಾವಂತ ಚೆಂಡೆ ವಾದಕರಾದ ಶ್ರೀನಿವಾಸ ಪ್ರಭು ಹಾಗೂ ಪ್ರಜ್ವಲ್ ಮುಂಡಾಡಿ ಭಾಗವಹಿಸಲಿದ್ದಾರೆ.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ವಾಲಿ ಪಾತ್ರದಲ್ಲಿ ವಾಸುದೇವ ರಂಗಭಟ್, ರಾಮನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಸುಗ್ರೀವನಾಗಿ ಗಣಪತಿ ಭಟ್ ಸಂಕದಗುಂಡಿ, ತಮಾಸುರನಾಗಿ ಜಬ್ಬಾರ್ ಸಮೊ, ಇಂದ್ರನಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ವಿಷ್ಣುವಾಗಿ ಸುರೇಶ್ ನಂದ್ರೋಳ್ಳಿ, ಭೃಗುವಾಗಿ ಸುನಿಲ್ ಹೊಲಾಡು ಹಾಗೂ ಬೃಹಸ್ಪತಿಯಾಗಿ ಮನು ಹಂದಾಡಿ ಕಾಣಿಸಿಕೊಳ್ಳಲಿದ್ದಾರೆ.
ಯಕ್ಷಪ್ರಿಯರು ಹಾಗೂ ತಾಳಮದ್ದಳೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದು, ತಾಳಮದ್ದಳೆ ವೀಕ್ಷಿಸಲು ಪ್ರವೇಶ ಶುಲ್ಕ 499 ರೂ. ಹಾಗೂ 199 ರೂ. ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರನ್ನು ಸಂಪರ್ಕಿಸಿಬಹುದಾಗಿದೆ – 97414 74255.
ಇದನ್ನೂ ಓದಿ : ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ KRS ಪಕ್ಷದ ಅಭ್ಯರ್ಥಿಯಾಗಿ ಡಾ. ಜಿ.ಆರ್ ಹೆಬ್ಬುರೂ ಘೋಷಣೆ!



















