ಬೆಂಗಳೂರು : RKB ಫಿಲ್ಮ್ಸ್ ನ ಭಾರತಿ ಶ್ರೀನಿವಾಸ್ ರಾಜ್ ನಿರ್ಮಾಣ ಮಾಡಿರುವ, ಹರಿಪ್ರಾಣ ನಿರ್ದೇಶಿಸಿರೋ ‘ಲವ್ 2 ಲಸ್ಸಿ’ ಸಿನಿಮಾದ ಹಾಡು ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
ಈ ಸಿನಿಮಾ ನಿರ್ದೇಶಕ ಹರಿಪ್ರಾಣಗೆ ಸುಮಾರು 18 ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ‘ಲವ್ 2 ಲಸ್ಸಿ’ ಸಿನಿಮಾವನ್ನು ಪುತ್ತೂರು, ಸುಳ್ಯ ಕಡೆ ಶೂಟ್ ಮಾಡಲಾಗಿದ್ದು, ಸಿನಿಮಾದಲ್ಲಿ ಜೀವಿತ ಮತ್ತು ಆರ್ಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಗನ್, ತಾರಾ, ವೈಷ್ಣವಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸಿನಿಮಾಗೆ ಎಂ.ಎ.ಅರ್ಜುನ್ ಧೋನಿ ಸಂಕಲನವಿದ್ದು, ವಿನು ಮನಸ್ಸು ಸಂಗೀತ ನೀಡಿದ್ದಾರೆ.

ಸಪ್ತಗಿರಿ ಗೌಡ ಸಿನಿಮಾ ಬಗ್ಗೆ ಮಾತನ್ನಾಡಿ, ಇದು ನನ್ನ ಮೊದಲ ಅನುಭವ. ಲವ್ ಟು ಲಸ್ಸಿ ಎರಡು ಸಿಹಿಯಾದ ಪದಗಳನ್ನ ಸೇರಿಸಿ ಒಂದೊಳ್ಳೆ ಟೈಟಲ್ ಕೊಟ್ಟಿದ್ದಾರೆ. ನಾನು ಹಲವು ಭಾಷೆಯ ಸಿನಿಮಾಗಳನ್ನ ನೋಡ್ತಾ ಇರ್ತೀನಿ. ಈ ಸಿನಿಮಾದ ಟೈಟಲ್ ತುಂಬಾ ಚೆನ್ನಾಗಿದೆ. ಇಂಡಸ್ಟ್ರಿಗೆ ಹೊಸ ಹೊಸ ಪ್ರತಿಭೆಗಳು ಬರಬೇಕು ಎಂದು ಹಾರೈಸಿದ್ದಾರೆ.

ನಿರ್ದೇಶಕ ಹರಿಪ್ರಾಣ ಮಾತನ್ನಾಡಿ, ಈ ಸಿನಿಮಾ ಟ್ರೂ ಲವ್ ಸ್ಟೋರಿ. ಪುತ್ತೂರು ಹುಡುಗಿ ಬೆಂಗಳೂರು ಹುಡುಗನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ದೀನಿ. ಇದು ಕೆಫೆ ಸ್ಟೋರಿ ಅಲ್ಲ. ಈ ರಿಯಲ್ ಲವ್ ಸ್ಟೋರಿ ಹುಡುಗಿಯಿಂದ ಅನುಮತಿ ಪಡೆದು ಮಾಡಿದ್ದೇವೆ. 2006-07ರಲ್ಲಿ ನಡೆದಂತ ಘಟನೆ. ಟ್ರಾಜಿಡಿ ಲವ್ ಸ್ಟೋರಿನೆ. ನನಗೆ ಹಾಡುಗಳು, ಕಥೆ ಬರೆಯೋದು ತುಂಬಾನೇ ಇಷ್ಟ ಎಂದಿದ್ದಾರೆ. ಸಂಗೀತ ನಿರ್ದೇಶಕ ವಿನು ಮನಸ್ಸು ಮಾತನ್ನಾಡಿ, ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಇಡೀ ಸಿನಿಮಾ ಚೆನ್ನಾಗಿ ಆಗಿದೆ. ನೀವೆಲ್ಲಾ ಕೇಳಿ ಎಂಜಾಯ್ ಮಾಡಿ ಎಂದಿದ್ದಾರೆ.
ಸಿನಿಮಾದ ನಾಯಕಿ ಜೀವಿತಾ ಮಾತನ್ನಾಡಿ, ಶೂಟಿಂಗ್ ಮಾಡುವಾಗ ಸಿನಿಮಾದ ಸ್ಟೋರಿ ತುಂಬಾ ಚೆನ್ನಾಗಿತ್ತು. ಈಗ ಹಾಡುಗಳನ್ನ ನೋಡುವಾಗ ಇನ್ನು ಅದ್ಬುತವಾಗಿ ಮೂಡಿ ಬಂದಿದೆ. ಲೂಡೋದಲ್ಲೂ ಇಬ್ಬರು ಜೊತೆಯಾಗಿ ಕೆಲಸ ಮಾಡಿದ್ದೀವಿ. ಹೆಚ್ಚು ಅಳುವುದಂತ ಇಲ್ಲ. ಒಂದು ಲವ್ ಸ್ಟೋರಿ ನಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಇದೆ. ಅಷ್ಟೇ ಅಲ್ಲ ಫ್ಯಾಮಿಲಿಗೆ ಕನೆಕ್ಟ್ ಆಗುವಂತ ವಿಚಾರಗಳು ಇದೆ ಎಂದಿದ್ದಾರೆ.
ನಟ ಆರ್ಯನ್ ಮಾತನ್ನಾಡಿ, ನಾನು ಕೂಡ ಸಿನಿಮಾ ರಿಪೋರ್ಟರ್ ಆಗಿ ಕೆಲಸ ಮಾಡಿದ್ದೀನಿ. ‘ಲವ್ 2 ಲಸ್ಸಿ’ ಸಿನಿಮಾ ರಿಯಲ್ ಆಗಿ ನಡೆದಿರೋದು ಅಂತ ಕೇಳಿ ಖುಷಿಯಾಯ್ತು. ನಾನು ಕೂಡ ಅದರ ಒಂದು ಭಾಗ ಅನ್ನೋದಕ್ಕೆ ಖುಷಿ. ಸ್ಟೋರಿ ಏನೋ ತುಂಬಾ ಚೆನ್ನಾಗಿದೆ. ಆದರೆ ಹೊಸಬರು ಎಂದ ಮೇಲೆ ನಿರ್ಮಾಪಕರು ಸಿಗೋದೆ ಕಷ್ಟ. ಆದರೆ ಭಾರತಿ ಮೇಡಂ ನಿರ್ಮಾಣ ಮಾಡಿರೋದು ಖುಷಿ ಇದೆ ಎಂದಿದ್ದಾರೆ.
ಇದನ್ನೂ ಓದಿ : ಸಸ್ಪೆನ್ಸ್ ಹಬ್ಬದೂಟ ಹಾಕುತ್ತಾ ‘ಅಪರಾಧಿ ನಾನಲ್ಲ’..?



















