ಗದಗ : ನಾನು ಅಡ್ಡ ಮತದಾನ ಮಾಡಿಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನಮಗೆ ಎನ್ ಡಿ ಎ ಅಭ್ಯರ್ಥಿ ಪರವಾಗಿ ಮತ ನೀಡಲು ಸೂಚನೆ ನೀಡಲಾಗಿತ್ತು. ನಾನು ಪ್ರಾಮಾಣಿಕವಾಗಿ ಮತವನ್ನು ಹಾಕಿದ್ದೇನೆ ಎಂದು ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಅಣೆ ಪ್ರಮಾಣ ಮಾಡಲು ನಾನು ಸಿದ್ದ. ಧರ್ಮಸ್ಥಳ ಅಷ್ಟೇ ಅಲ್ಲಾ, ಯಾವುದೇ ದೇವರ ಮುಂದೆ ಆಣೆ ಪ್ರಮಾಣ ಮಾಡಲು ಸಿದ್ದ. ಏನಾದರೂ ಸಾಬೀತಾದ್ರೆ ನಾನು ರಾಜೀನಾಮೆ ನೀಡಲು ಸಿದ್ದ.ನನ್ನ ಮೇಲೆ ಷ್ಯಡ್ಯಂತ್ರ ನಡೆಯುತ್ತಿದೆ, ಕೆಲವು ಕಾಂಗ್ರೆಸ್ ನಾಯಕರ ಕೈವಾಡಿದೆ ಎಂದು ಕಿಡಿಕಾರಿದ್ದಾರೆ.
ಡಿ ಕೆ ಶಿವಕುಮಾರ್ ಅವರ ಜೊತೆಗೆ ಒಳ್ಳೆಯ ಬಾಂಧವ್ಯ ವಿಚಾರವಾಗ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಜೊತೆಗೆ ಯಾವುದೇ ಮಾತುಕತೆ ಆಗಿಲ್ಲ. ಧರ್ಮಸ್ಥಳ ಅಷ್ಟೇ ಅಲ್ಲ, ಎಲ್ಲಿಯಾದರೂ ಪ್ರಮಾಣ ಮಾಡಲು ನಾನು ಸಿದ್ದ ಎಂದಿದ್ದಾರೆ.



















