ಬೆಂಗಳೂರು : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ಕೈತುಂಬ ಪಿಎಫ್ ಹಣ ಲಭಿಸಿರುತ್ತದೆ. 60 ವರ್ಷ ದಾಟಿದವರು, ನಿವೃತ್ತರಿಗೆ ಇಂತಹ ಹಣವನ್ನು ಯಾವ ರೀತಿ ಹೂಡಿಕೆ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ರಿಸ್ಕ್ ತೆಗೆದುಕೊಳ್ಳಲೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೈಯಲ್ಲಿರುವ ಹಣಕ್ಕೆ ಪ್ರತಿ ತಿಂಗಳು 20 ಸಾವಿರ ರೂ. ಬಡ್ಡಿ ಆದಾಯ ಲಭಿಸುವ ಕೇಂದ್ರ ಸರ್ಕಾರದ ಹಿರಿಯ ನಾಗರಿಕರ ಉಳಿತಾಯ ಯೋಜನೆಯು (SCSS) ಕೈ ಹಿಡಿಯುತ್ತದೆ.
ಹೌದು, 60 ವರ್ಷ ದಾಟಿದವರು ಪೋಸ್ಟ್ ಆಫೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 20 ಸಾವಿರ ರೂಪಾಯಿ ಬಡ್ಡಿ ಆದಾಯ ಪಡೆಯಬಹುದಾಗಿದೆ. ಇದರಿಂದ ಹಿರಿಯ ನಾಗರಿಕರು ಸ್ವಾವಲಂಬಿ ಜೀವನವನ್ನು ಸಾಗಿಸಲು ಸಾಧ್ಯವಾಗಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 20 ಸಾವಿರ ರೂ. ಬಡ್ಡಿ ಆದಾಯ ಗಳಿಸಬಹುದು. ಹಿರಿಯ ನಾಗರಿಕರಿಗೆಂದೇ ಯೋಜನೆಯನ್ನು ಜಾರಿಗೆ ತರಲಾಗಿದ್ದು, ವರ್ಷಕ್ಕೆ ಶೇ.8.2ರಷ್ಟು ಬಡ್ಡಿ ನೀಡಲಾಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಸುರಕ್ಷತೆಯೂ ಇರುತ್ತದೆ. ನಿಶ್ಚಿತ ಆದಾಯವೂ ಖಾತೆಗೆ ಜಮೆಯಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಒಬ್ಬ ವ್ಯಕ್ತಿ 30 ಲಕ್ಷ ರೂಪಾಯಿ ಗರಿಷ್ಠ ಹೂಡಿಕೆ ಮಾಡಬಹುದು. ನೀವು 29.27 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 20 ಸಾವಿರ ರೂಪಾಯಿ ಬಡ್ಡಿ ಆದಾಯ ಲಭಿಸುತ್ತದೆ. 60 ವರ್ಷ ಮೇಲ್ಪಟ್ಟವರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಾಗೆಯೇ, ಸ್ವಯಂ ನಿವೃತ್ತಿ ಹೊಂದಿದವರು 55 ವರ್ಷದ ನಂತರ ಹೂಡಿಕೆ ಮಾಡಲು ಅವಕಾಶವಿದೆ.
ಇದನ್ನೂ ಓದಿ : ರಾಜಸ್ಥಾನ ತೊರೆದು ಗುಜರಾತ್‌ಗೆ ವಲಸೆ ಹೋದ GT ವೇಗಿ ಅಶೋಕ್ ಶರ್ಮಾ!


















