ಉಡುಪಿ ; ದೇಶದ ಅಗ್ರಗಣ್ಯ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.
ಅನಂತ್ ಅಂಬಾನಿ ಜೂನ್ 13 ಶನಿವಾರದಂದೇ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ದಿನಾಂಕ ನಿಗದಿಯಾಗಿತ್ತು. ಆದರೆ ಭಾರೀ ಮಳೆಯ ಕಾರಣ ಮುಂಬೈನಿಂದ ವಿಮಾನ ಹಾರಾಟ ಸಾಧ್ಯವಾಗದೇ, ಕೊಲ್ಲೂರು ಭೇಟಿಯನ್ನು ಮುಂದೂಡಿದ್ದರು.
ಭಾನುವಾರ ಸಂಜೆ ವೇಳೆಗೆ ಅನಂತ್ ಅಂಬಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಕ್ತಿಭಾವದಿಂದ ದೇವಿಯ ಆಶೀರ್ವಾದ ಪಡೆದ ಅನಂತ್ ಅಂಬಾನಿ ಅವರ ಭೇಟಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಗಮನ ಸೆಳೆಯಿತು.
ತಾಯಿ ಮುಕಾಂಬಿಕೆಯ ದರ್ಶನದ ನಂತರ ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಅನಂತ್ ಅಂಬಾನಿ ಭೇಟಿ ನೀಡಿದ್ದಾರೆ. ಅಲ್ಲಿ ಪೊಡವಿಗೊಡೆಯನ ದರ್ಶನ ಮಾಡಿ ಶಿರೂರು ಶ್ರೀಪಾದರಿಂದ ಆಶೀರ್ವಚನ ಪಡೆದಿದ್ದಾರೆ.
ಇದನ್ನೂ ಓದಿ : ಅಯ್ಯಪ್ಪ ಮಾಲೆ ಧರಿಸಿ, ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಆರಂಭಿಸಿದ ಹೆಚ್‌ಡಿಕೆ!



















