ಬೆಂಗಳೂರು : ಇದೇನಿದ್ದರೂ ವಂಚನೆಯ ಕಾಲ. ಆಧಾರ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆಯಾದರೆ ಸೈಬರ್ ವಂಚನೆಯಾಗುವ ಸಾಧ್ಯತೆ ಹೆಚ್ಚಿರುತ್ತವೆ. ಅದರಲ್ಲೂ, ಆಧಾರ್ ಕಾರ್ಡ್ ಬಳಸಿಕೊಂಡು ಹಲವು ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಹಾಗಾಗಿಯೇ, ಆಧಾರ್ ಕಾರ್ಡ್ನ ದುರುಪಯೋಗವನ್ನು (Misuse) ಪತ್ತೆಹಚ್ಚಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI)ವು ಕೆಲವು ಸರಳ ಮಾರ್ಗಗಳನ್ನು ನೀಡಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಈ ಕ್ರಮಗಳನ್ನು ಅನುಸರಿಸಿ.
ಹೀಗೆ ಪತ್ತೆಹಚ್ಚಿ
ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸಿ. ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಲಿ ಮತ್ತು ಯಾವಾಗ ಬಳಸಲಾಗಿದೆ ಎಂಬುದನ್ನು ನೋಡಲು ಇದು ಒಳ್ಳೆಯ ಮಾರ್ಗ. UIDAI ನ ಅಧಿಕೃತ ವೆಬ್ಸೈಟ್ myAadhaar ಗೆ ಭೇಟಿ ನೀಡಿ. ನಿಮ್ಮ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಬಳಸಿ ಲಾಗಿನ್ ಆಗಿ. ‘Aadhaar Authentication History’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಅವಧಿಯನ್ನು ಆರಿಸಿ: ನೀವು ಪರಿಶೀಲಿಸಲು ಬಯಸುವ ದಿನಾಂಕದ ವ್ಯಾಪ್ತಿಯನ್ನು (Date Range) ಆಯ್ಕೆ ಮಾಡಿ (ಉದಾಹರಣೆಗೆ: ಕಳೆದ 6 ತಿಂಗಳು).
ಇಲ್ಲಿ ನಿಮ್ಮ ಆಧಾರ್ ಬಳಕೆಯಾದ ದಿನಾಂಕ, ಸಮಯ ಮತ್ತು ಯಾವ ಕೆಲಸಕ್ಕಾಗಿ (OTP, ಬಯೋಮೆಟ್ರಿಕ್ ಅಥವಾ ಡೆಮೊಗ್ರಾಫಿಕ್) ಬಳಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ನಿಮಗೆ ಗೊತ್ತಿಲ್ಲದ ಯಾವುದೇ ವಹಿವಾಟು ಕಂಡುಬಂದಲ್ಲಿ, ಅದು ದುರುಪಯೋಗವಾಗಿರಬಹುದು.
ಒಂದು ವೇಳೆ ನಿಮ್ಮ ಆಧಾರ್ ದುರುಪಯೋಗವಾಗಿದೆ ಎಂದು ದೃಢಪಟ್ಟರೆ, ಪ್ರಾಧಿಕಾರದ ಟೋಲ್-ಫ್ರೀ ಸಂಖ್ಯೆ 1947 ಕ್ಕೆ ಕರೆ ಮಾಡಿ ದೂರು ಸಲ್ಲಿಸಿ. ಹಾಗೆಯೇ, help@uidai.gov.in ಗೆ ಮೇಲ್ ಮಾಡುವ ಮೂಲಕವೂ ದೂರು ನೀಡಬಹುದು. https://pgportal.gov.in ವೆಬ್ ಸೈಟ್ ಗೆ ಭೇಟಿ ನೀಡಿಯೂ ದೂರು ನೀಡಬಹುದು.
ಇದನ್ನೂ ಓದಿ : “ಅಪರೂಪದ ಪ್ರತಿಭೆ” : IPL ಯುವ ತಾರೆ ಸೂರ್ಯವಂಶಿ ಆಟಕ್ಕೆ ಮನಸೋತ ಗ್ರೆಗ್ ಚಾಪೆಲ್!



















