ಬಳ್ಳಾರಿ : ಬಳ್ಳಾರಿಯ ಕುರಗೋಡು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5.52 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಬಳಿ ಲಾರಿ ಸಮೇತ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಖದೀಮರು ಲಾರಿ ಮೂಲಕ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.
ಬಾದಹಟ್ಟಿ ಗ್ರಾಮದ ಬಳಿಯ ಲೇಔಟ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಆರೋಪಿಗಳು, ಬಳಿಕ ಲಾರಿಗೆ ಲೋಡ್ ಮಾಡಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಅಕ್ಕಿ ದಂಧೆಕೋರರಾದ ಯರ್ರಿಸ್ವಾಮಿ, ಉಮಾಶಂಕರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಸ್ನೇಹ ನಿರಾಕರಿಸಿದ್ದಕ್ಕೆ ಯುವತಿ, ತಾಯಿಯ ಅಶ್ಲೀಲ ಡೀಪ್‌ಫೇಕ್ ಚಿತ್ರ ಸೃಷ್ಟಿ : ಧಾರ್ಮಿಕ ಪ್ರವಚನಕಾರ ಸೈಬರ್ ಕ್ರೈಂ ಬಲೆಗೆ!


















