ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಸಿಡಿಲಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ನಿನ್ನೆ ಸಂಜೆ ಕುಂದಾಪುರ, ಬೈಂದೂರಿನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಹೆದ್ದಾರಿ ಕಾಮಗಾರಿ ನಿರತ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಪಂಜಾಬ್ ಮೂಲದ 35 ವರ್ಷದ ಅಶುತೋಷ್ ಸಿಂಗ್ ಮೃತ ದುರ್ದೈವಿ. ಆತನ ಜೊತೆಗಿದ್ದ ಇನ್ನೋರ್ವ ಗಾಯಗೊಂಡಿದ್ದು, ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಅಶುತೋಷ್ ಸಿಂಗ್ಹೆದ್ದಾರಿ ಕಾಮಗಾರಿ ನಿರ್ವಹಿಸುವ ಐಆರ್‌ಬಿ ಸಂಸ್ಥೆಯ ಕಾರ್ಮಿಕರಾಗಿದ್ದು, ಕುಂದಾಪುರ ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಅರಾಟೆ ಸೇತುವೆ ಬಳಿ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಅಶುತೋಷ್ ನನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರೊಳಗೆ ಅವರು ಸಾವನ್ನಪ್ಪಿದ್ದಾರೆ. ನಂತರ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ದೇಶದಲ್ಲೇ ಜನಗಣತಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ – ಬೆಂಗಳೂರಲ್ಲಿ ಶೇ.99.96ರಷ್ಟು ಗಣತಿ ಪೂರ್ಣ!



















