ಬೆಂಗಳೂರು : ದೇಶದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಈಗ ಸಾಲಗಾರರಿಗೆ ಶಾಕಿಂಗ್ ಸುದ್ದಿ ನೀಡಿದೆ. ಗೃಹ ಸಾಲ ಸೇರಿ ಹಲವು ಮಾದರಿಗಳ ಸಾಲದ ಮೇಲಿನ ಬಡ್ಡಿದರದಲ್ಲಿ 0.05 ಬೇಸಿಸ್ ಪಾಯಿಂಟ್‌ಗಳನ್ನು (Canara Bank hikes MCLR) ಏರಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲ, ವಾಹನ ಸಾಲ ಸೇರಿ ವಿವಿಧ ಮಾದರಿಯ ಸಾಲಗಳ ಮೇಲಿನ ಇಎಂಐ ಜಾಸ್ತಿಯಾಗಲಿದೆ. ಸಾಲಗಾರರಿಗೆ ಇಎಂಐ ಹೊರೆ ಇನ್ನಷ್ಟು ಜಾಸ್ತಿಯಾಗಲಿದೆ.
ಕೆನರಾ ಬ್ಯಾಂಕ್ ಹೊಸ ಬಡ್ಡಿದರದಿಂದಾಗಿ ವೈಯಕ್ತಿಕ ಸಾಲ, ವಾಹನ ಸಾಲ ಮತ್ತು ಕೆಲವು ಹಳೆಯ ಗೃಹ ಸಾಲಗಳು ಎಂಸಿಎಲ್‌ಆರ್‌ಗೆ ಲಿಂಕ್ ಆಗಿದ್ದರೆ, ಅವುಗಳ ಮಾಸಿಕ ಕಂತು ಜಾಸ್ತಿಯಾಗಲಿದೆ. ಬ್ಯಾಂಕುಗಳು ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರವನ್ನೇ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ಎಂದು ಕರೆಯಲಾಗುತ್ತದೆ. ಇದು ಜಾಸ್ತಿಯಾದರೆ ಇಎಂಐ ಹೊರೆ ಜಾಸ್ತಿಯಾಗಲಿದೆ. ಕಡಿಮೆಯಾದರೆ ಇಎಂಐ ಮೊತ್ತ ಕಡಿಮೆಯಾಗುತ್ತದೆ.
ಸಾಲದ ಅವಧಿ ಹೊಸ ಬಡ್ಡಿದರ ಹಳೆಯ ಬಡ್ಡಿದರ
1 ತಿಂಗಳು 7.90% 7.95%
3 ತಿಂಗಳು 8.15% 8.20%
6 ತಿಂಗಳು 8.50% 8.55%
1 ವರ್ಷ 8.70% 8.75%
2 ವರ್ಷ 8.95% 9.00%
3 ವರ್ಷ 9.00% 9.05%
ಸಾಲಗಾರರು ಯಾವುದೇ ಸಾಲವನ್ನು ಪಡೆಯುವಾಗ ಎಂಸಿಎಲ್ ಆರ್ ಅಥವಾ ನಿಶ್ಚಿತ ಬಡ್ಡಿದರದ ಆಯ್ಕೆಗಳನ್ನು ಹೊಂದಿರುತ್ತಾರೆ. ಎಂಸಿಎಲ್ ಆರ್ ಸಾಲವನ್ನು ಆಯ್ಕೆ ಮಾಡಿಕೊಂಡರೆ, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ಏರಿಕೆ ಮಾಡಿದರೆ ಅಥವಾ ಇಳಿಕೆ ಮಾಡಿದರೆ, ಇಎಂಐ ಮೊತ್ತದಲ್ಲಿ ಏರಿಳಿತ ಉಂಟಾಗುತ್ತದೆ. ಆದರೆ, ನಿಶ್ಚಿತ ಬಡ್ಡಿಯನ್ನು ಆಯ್ಕೆ ಮಾಡಿಕೊಂಡರೆ ಸಾಲ ತೀರುವವರೆಗೂ ಒಂದೇ ಬಡ್ಡಿದರ ಅನ್ವಯವಾಗುತ್ತದೆ.
ಇದನ್ನೂ ಓದಿ : ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ ; ಬೆಂಗಳೂರಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ!


















