ಬೆಂಗಳೂರು : ಪತಿ ಸತ್ತು ತಿಂಗಳುಗಳು ಕಳೆಯೋ ಮುನ್ನವೇ ಮತ್ತೊಬ್ಬನ ಜೊತೆ ಹಸೆಮಣೆ ಏರಲು ರೆಡಿಯಾದ ಮಹಿಳೆಗೆ ಬಿಗ್ ಶಾಕ್ ಎದುರಾಗಿದ್ದು, ಹೂತಿಟ್ಟ ಶವ ಹೊರತೆಗೆದು ಪೊಲೀಸರು ಮರು ತನಿಖೆ ನಡೆಸಲು ಮುಂದಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಇಂತಿಯಾಜ್ ಪಾಷಾ ಎಂಬಾತನ ಸಾವಿನ ಬಗ್ಗೆ ಸಂಬಂಧಿಕರಿಗೆ ಆತ ಸತ್ತ 6 ತಿಂಗಳ ಬಳಿಕ ಅನುಮಾನ ಮೂಡಿದ್ದು, ಇಂತಿಯಾಜ್ ಪತ್ನಿ ಮೇಲೆ ಆರೋಪ ಮಾಡಿ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

6 ತಿಂಗಳ ಹಿಂದೆ ಮನೆಯಲ್ಲಿ ಮೃತಪಟ್ಟಿದ್ದ ಇಂತಿಯಾಜ್ ಪಾಷಾ ಮೃತ ದೇಹವನ್ನ ಹೊರಗೆ ತೆಗೆದಿದ್ದು, ಬೆಂಗಳೂರು HAL ಠಾಣೆ ಪೊಲೀಸರು ಮರು ತನಿಖೆ ನಡೆಸಸುತ್ತಿದ್ದಾರೆ.
ರಾತ್ರಿ ಮಲಗಿದ್ದಲ್ಲೇ ಹೆಣವಾಗಿದ್ದ ಇಂತಿಯಾಜ್ ಪಾಷಾ, ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾನೆ ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಆದ್ರೆ, ಇದೀಗ ಇಂತಿಯಾಜ್ ಪಾಷಾ ಎಂಬಾತನ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ಆತನ ಪತ್ನಿಗೆ ಬೇರೆ ವ್ಯಕ್ತಿ ಜೊತೆ ಸಂಬಂಧವಿತ್ತು ಎಂದು ಮೃತನ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಇದೀಗ ಗಂಡ ಸತ್ತ ಆರೇ ತಿಂಗಳಿಗೆ ಮತ್ತೊಬ್ಬನ ಜೊತೆ ಮದುವೆ ಆಗಲು ಆಕೆ ಮುಂದಾಗಿದ್ದಾಳೆ ಎಂದು ಇಂತಿಯಾಜ್ ಪಾಷಾ ಕುಟುಂಬಸ್ಥರು ದೂರಿದ್ದಾರೆ.
ಆತನ ಹೆಂಡ್ತಿ ಮೇಲೆ ಅನುಮಾನವಿದೆ ಎಂದು ಮೃತ ಇಂತಿಯಾಜ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರನ ಪತ್ನಿ ಹಾಗೂ ಆಕೆಯ ಸ್ನೇಹಿತ ಸೇರಿ ಇಂತಿಯಾಜ್ಗೆ ಏನೋ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ದೂರು ದಾಖಲಿಸಕೊಂಡ ಪೊಲೀಸರು ಶವ ಹೊರತೆಗೆಯಲು ತಹಶೀಲ್ದಾರರಿಗೆ ಮನವಿ ಮಾಡಿದ್ರು. ತಹಶೀಲ್ದಾರರ ಆದೇಶದ ಮೇರೆಗೆ ಸಾವಿನ ತನಿಖೆ ನಡೆಯುತ್ತಿದೆ. HAL ಪೊಲೀಸ್ ಠಾಣೆಯಲ್ಲಿ UDR ದಾಖಲಿಸಿ ತನಿಖೆ ಶುರು ಮಾಡಿದ್ದು, ಇಂದು ಮೃತದೇಹ ಹೊರೆತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಮರಣೋತ್ತರದ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ ; ಬೆಂಗಳೂರಿನ ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ!


















