ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿ ಬ್ರಿಡ್ಜ್ ಕೆಳಗೆ ಭಾರಿ ಪ್ರಮಾಣದ ಬುಲೆಟ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೆಷಿನ್ ಗನ್‌ಗಳಿಗೆ ಬಳಸುವ ಒಟ್ಟು 214 ಬುಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಬ್ರಿಡ್ಜ್ ಬಳಿ ಅಪರಿಚಿತರು ಈ ಬುಲೆಟ್‌ಗಳನ್ನು ಬಿಸಾಡಿ ಹೋಗಿದ್ದಾರೆ. ಪತ್ತೆಯಾದ ಬುಲೆಟ್‌ಗಳು 1969ರಲ್ಲಿ ಮಹಾರಾಷ್ಟ್ರದಲ್ಲಿ ತಯಾರಾದವುಗಳಾಗಿದ್ದು, ಇವುಗಳಲ್ಲಿ 7.6 mm ಮಾದರಿಯ ಗುಂಡುಗಳಿವೆ. ಕಾಮಸಮುದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, 214 ಬುಲೆಟ್‌ಗಳ ಪೈಕಿ 135 ಜೀವಂತ ಬುಲೆಟ್‌ಗಳಿದ್ದರೆ (Live Bullets), 85 ಖಾಲಿಯಾಗಿರುವುದು ಕಂಡುಬಂದಿದೆ.
ಇವುಗಳನ್ನು ಮಿಸ್ ಫೈರ್ ಅಥವಾ ಡಮ್ಮಿ ಬುಲೆಟ್‌ಗಳಿರಬಹುದು ಎಂದು ಶಂಕಿಸಲಾಗಿದ್ದು, ಹಲವು ತಿಂಗಳ ಹಿಂದೆಯೇ ಇಲ್ಲಿ ಬಿಸಾಡಿರಬಹುದು ಎನ್ನಲಾಗಿದೆ. ಗಡಿ ಭಾಗದಲ್ಲಿ ಇಷ್ಟು ದೊಡ್ಡ ಪ್ರಮಾಣದ ಗುಂಡುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬುಲೆಟ್‌ಗಳನ್ನು ತಂದವರು ಯಾರು ಮತ್ತು ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಕನ್ನಡಿಗನ ಅದ್ಭುತ ಕ್ಯಾಚ್‌ಗೆ ದಂಗಾದ ವಿರಾಟ್ ಕೊಹ್ಲಿ – ವಿಡಿಯೋ ನೋಡಿ!



















