ಆನೇಕಲ್ : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ.
ಹಳೆ ಚಂದಾಪುರದ ಶೆಲ್ ಪೆಟ್ರೋಲ್ ಬಂಕ್ ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಚಂದಾಪುರ ನಿವಾಸಿ ಚಂದನ್ (28) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಂದನ್ ಟೀ ಕುಡಿಯಲು ಶೆಲ್ ಪೆಟ್ರೋಲ್ ಬಂಕ್‌ನ ಸ್ಟಾಲ್‌ಗೆ ತೆರಳಿದ್ದ ವೇಳೆ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಐದಾರು ಮಂದಿಯ ಗ್ಯಾಂಗ್ ಅವನ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
“ತಪ್ಪಾಯಿತು” ಎಂದು ಚಂದನ್ ಬೇಡಿಕೊಂಡರೂ ಹಲ್ಲೆ ನಿಲ್ಲಿಸದೇ, “ನಾವು ಯಾರು ಅಂತ ತೋರಿಸುತ್ತೇವೆ” ಎಂದು ಬೆದರಿಕೆ ಹಾಕಿ ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲ್ಲೆ ನಡೆಸಿದವರು ತಿರುಮಗೊಂಡನಹಳ್ಳಿ ನಿವಾಸಿಗಳು ಎನ್ನಲಾಗಿದೆ. ಈ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಕ್ಷುಲ್ಲಕ ಜಗಳಕ್ಕೆ ಬಲಿ ಆಯ್ತು ಜೀವ!



















