ಚಾಮರಾಜನಗರ : ಚಾಮರಾಜನಗರದ ಸಂತೇಮರಳ್ಳಿ ಗ್ರಾಮದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿನ ದೇವರಾಜ್ ಎಂಬುವವರ ಸಲೂನ್‌ಗೆ ಮಂಗವೊಂದು ಬಂದು, ಶಿಸ್ತಿನಿಂದ ಹೇರ್ ಕಟ್ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

ದಿನನಿತ್ಯ ಸಲೂನ್ ಬಳಿ ಬರುತ್ತಿದ್ದ ಈ ಮಂಗ, ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿತ್ತು. ಎಷ್ಟೇ ಗದರಿಸಿದರೂ ಕ್ಷೌರಿಕನ ಕೆಲಸ ಮುಗಿಯುವ ವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ.
ಮಂಗನ ಈ ನಡೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಪ್ರೀತಿಯಿಂದ ಅದರ ತಲೆ ಬಾಚಿದ್ದಾರೆ. ಬಳಿಕ ಕೇಶ ವಿನ್ಯಾಸ ಮಾಡುವಂತೆ ನಟಿಸಿ ತಲೆ ಬಾಚಿದಾಗ, ಮಂಗ ಯಾವುದೇ ಗಲಾಟೆ ಮಾಡದೆ ಗಂಭೀರವಾಗಿ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಹೊಸ ಜೂಟಾಟ – ಸಿಟಿ ಫೇಸ್‌ಲಿಫ್ಟ್, ZR-V ಮೇ ತಿಂಗಳಲ್ಲೇ ಲಗ್ಗೆ!


















