ವಿಜಯಪುರ : ಇಲ್ಲಿನ ರಾಜಕುಮಾರ ಲೇಔಟ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ವಿರಾಜ್ ಸಂತೋಷ್ ಬಿರಾದಾರ್ ಎಂಬ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ನಾಯಿಯೊಂದು ಬಾಲಕನನ್ನು ಕಚ್ಚಿ ಸುಮಾರು 100 ಅಡಿ ದೂರ ಎಳೆದೊಯ್ದಿದೆ.

ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೆರೆಹೊರೆಯವರ ಸಕಾಲಿಕ ಮಧ್ಯಪ್ರವೇಶದಿಂದ ಬಾಲಕನ ಜೀವ ಉಳಿದಿದೆ. ಬಾಲಕನ ಬೆನ್ನು ಮತ್ತು ತೊಡೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ಗಂಭೀರ ಗಾಯಗೊಂಡಿರೋದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ವಿರಾಜ್ ದೊಡ್ಡಪ್ಪ ರಾಜಶೇಖರ್ ಅವರ ಪ್ರಕಾರ, ಘಟನೆ ನಡೆದ ತಕ್ಷಣವೇ ಮಹಾನಗರ ಪಾಲಿಕೆಗೆ ಮಾಹಿತಿ ನೀಡಲಾಗಿದೆ.
ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಲಕನ ಮೇಲೆ ದಾಳಿ ಮಾಡಿ ಎಳೆಯ್ದೊಯ್ದ ಬೀದಿ ನಾಯಿ ಸೇರಿ 2 ನಾಯಿಯನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : Honor Play 80 Plus ಸ್ಮಾರ್ಟ್‌ಫೋನ್ ಬಿಡುಗಡೆ : 7,500mAh ಬ್ಯಾಟರಿ ಸಾಮರ್ಥ್ಯದ ಫೋನ್ ಬೆಲೆ ಎಷ್ಟು ಗೊತ್ತಾ?



















