ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನ, ಕಳ್ಳಾಟಗಳ ಕುರಿತು ಸುದ್ದಿ ಹೊರಬರುವುದು ಹೊಸತೇನಲ್ಲ. ಅದೆಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದರೂ ಕೈದಿಗಳು ಮಾತ್ರ ತಮ್ಮ ಮನಸೋಇಚ್ಛೆ ಜೀವನ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಕಾರಾಗ್ರಹದಲ್ಲಿ ಮತ್ತೆ ವಿಚಾರಣಾಧೀನ ಕೈದಿಯೊಬ್ಬ ಸೆಲ್ನಲ್ಲಿ ಕುಳಿತೇ ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಚಾರಣಾಧೀನ ಖೈದಿಯಾಗಿದ್ದ ಅಕ್ಬರ್, ಜೈಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಮೊಬೈಲ್ ಬಳಸುತ್ತಿದ್ದ ಎನ್ನಲಾಗಿದೆ. ಈತ ಜೈಲಿನ ಒಳಭಾಗದಿಂದಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಾತುಕತೆ ನಡೆಸಿದ್ದ.
ಆಕೆಯ ಪತ್ನಿ ಈ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಏಪ್ರಿಲ್ 9ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ಏಪ್ರಿಲ್ 28ರಂದು ಅಕ್ಬರ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ರಿಲೀಸ್ ಆದ ವಿಡಿಯೋವನ್ನೂ ಪತ್ನಿ ಹಂಚಿಕೊಂಡಿದ್ದಳು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಕೆ ಇನ್‌ಸ್ಟಾದಿಂದ ವಿಡಿಯೋ ಡಿಲೀಟ್ ಮಾಡಿದ್ದಾಳೆ. ಸದ್ಯ ಈ ಘಟನೆ ಬೆನ್ನಲ್ಲೇ ಮತ್ತೊಮ್ಮೆ ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದ್ದು, ಸಾರ್ವಜನಕಿ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ತುಮಕೂರಲ್ಲಿ ನವಿಲುಗಳ ಮಾರಣಹೋಮ ಕೇಸ್‌ಗೆ ಬಿಗ್ ಟ್ವಿಸ್ಟ್ – FSL ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!



















