ಉಡುಪಿ : ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಬಹುಬೇಡಿಕೆ ಹೊಂದಿರುವ ಚೆಲುವೆ ಪೂಜಾ ಹೆಗ್ಡೆ, ಮೂಲತಃ ಕರ್ನಾಟಕದ ಕರಾವಳಿಯವರು. ಹೀಗಾಗಿ ಪೂಜಾ ಹೆಗ್ಡೆ ಆಗಾಗ ಮಂಗಳೂರು, ಉಡುಪಿಗೆ ಬರುತ್ತಲೇ ಇರುತ್ತಾರೆ. ಇದೀಗ ತುಳುನಾಡಿನ ಮಣ್ಣಿನ ಮಗಳಾಗಿ ಪೂಜಾ ಹೆಗ್ಡೆ ಭಕ್ತಿ ಮೆರೆದಿದ್ದಾರೆ.
ನಟಿ ಪೂಜಾ ಹೆಗ್ಡೆ ಉಡುಪಿಯ ತಮ್ಮ ಮೂಲಮನೆ ಕುತ್ಯಾರಿನಲ್ಲಿರುವ ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಪವಿತ್ರ ಡೆಕ್ಕೆ ಬಲಿ ಸೇವೆಯಲ್ಲಿ ಭಾಗವಹಿಸಿ ಭಕ್ತರ ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ ಎತ್ತರಕ್ಕೇರಿದರೂ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಕಳೆದುಕೊಳ್ಳದ ಪೂಜಾ, ಸರಳವಾಗಿ ಶ್ರದ್ಧಾ ಭಕ್ತಿಯಿಂದ ನಾಗಾರಾಧನೆಯಲ್ಲಿ ಪಾಲ್ಗೊಂಡಿದ್ದಾರೆ.
ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಡೆಕ್ಕೆ ಬಲಿ ಸೇವೆಯಲ್ಲಿ ಪೂಜಾ ಹೆಗ್ಡೆ ಕುಟುಂಬ ಸಮೇತರಾಗಿ ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದದಾರೆ. ಸ್ಥಳೀಯರೊಂದಿಗೆ ಸರಳವಾಗಿ ಬೆರೆತ ಅವರು, ನಾಗದರ್ಶನ ಹಾಗೂ ಡಮರು ಮೇಳದ ನಡುವೆ ನಡೆದ ಈ ಸೇವೆಯಲ್ಲಿ ಭಕ್ತಿ ಮೆರೆದಿದ್ಧಾರೆ.
ಇದನ್ನೂ ಓದಿ : ಅಮಿತ್ ಶಾ ಆಪ್ತನೆಂದು ನಂಬಿಸಿ ಕೋಟಿ ಕೋಟಿ ವಂಚನೆ – ಆರೋಪಿ ಸುಜಯೇಂದ್ರ ವಿರುದ್ಧ ಜಾರ್ಜ್ಶೀಟ್ ಸಲ್ಲಿಕೆ!


















