ಇಂಡೋನೇಷ್ಯಾ : ಇಂಡೋನೇಷ್ಯಾದ ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ (ಸೋಮವಾರ ಏ.27) ತಡರಾತ್ರಿ ದೂರದ ಪ್ರಯಾಣಿಕರ ರೈಲು ಮತ್ತು ಸ್ಥಳೀಯ ಪ್ರಯಾಣಿಕ ರೈಲಿನ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಸುಮಾರು 81 ಮಂದಿ ಗಾಯಗೊಂಡಿದ್ದು, ಸಾವಿಗೀಡಾದವರ ಸಂಖ್ಯೆ ಏಳಕ್ಕೆ ಏರಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಪಘಾತ ನಡೆದಿದ್ದೇಗೆ?
ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆಗೆ ಮತ್ತೊಂದು ರೈಲು ಬಂದು ಪ್ರಯಾಣಿಕ ರೈಲಿನ ಮಹಿಳೆಯರ ಬೋಗಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ರೈಲಿನ ಬೋಗಿಗಳು ಜಖಂಗೊಂಡು 7 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಬೋಗಿಯಲ್ಲೇ ಸಿಲುಕಿದ್ದಾರೆ. ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಅಪಘಾತದ ತನಿಖೆ ನಡೆಸುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಬದುಕುಳಿದವರ ರಕ್ಷಣೆಗೆ ರಕ್ಷಣಾ ಸಿಬ್ಬಂದಿ ರೈಲು ವಿಭಾಗಗಳ ಲೋಹವನ್ನು ಕತ್ತರಿಸಲು ಆಂಗಲ್ ಗ್ರೈಂಡರ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿ ಹೊಡೆದ ಸರ್ಕಾರಿ ಬಸ್.. ತಪ್ಪಿದ ಭಾರಿ ಅನಾಹುತ!



















