ಬೆಂಗಳೂರು: ನೀವೇನಾದರೂ ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ನಿಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿದ್ದರೆ ನಿಮಗೊಂದು ಸಿಹಿ ಸುದ್ದಿ ಕಾದಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನಲ್ಲಿ ಖಾಲಿ ಇರುವ ಒಂದು ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ (NMPT Recruitment 2026) ಹೊರಡಿಸಲಾಗಿದೆ. ಒಂದು ಸೀನಿಯರ್ ಮೆರಿನ್ ಎಂಜಿನಿಯರ್ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್
ಹುದ್ದೆ ಹೆಸರು: ಸೀನಿಯರ್ ಮೆರಿನ್ ಎಂಜಿನಿಯರ್
ಒಟ್ಟು ಹುದ್ದೆಗಳು: 1
ಉದ್ಯೋಗ ಸ್ಥಳ: ಮಂಗಳೂರು
ಅರ್ಜಿ ಸಲ್ಲಿಕೆ ವಿಧಾನ ಆಫ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 1
ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 44 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ. ನೇಮಕಾತಿ ಹೊಂದಿದವರಿಗೆ ಮಾಸಿಕ 80 ಸಾವಿರ ರೂಪಾಯಿಯಿಂದ 2.2 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ನಡೆಸಲಾಗುತ್ತದೆ. ಇದಾದ ಬಳಿಕ ಸಂದರ್ಶನಕ್ಕೆ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ newmangaloreport.gov.in ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆಯನ್ನು ಓದಬೇಕು
ಆನ್ಲೈನ್ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಳ್ಳಬೇಕು
ಅರ್ಜಿಯನ್ನು ಯಾವುದೇ ತಪ್ಪುಗಳಿಲ್ಲದ ರೀತಿ ಭರ್ತಿ ಮಾಡಬೇಕು
ಬಳಿಕ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕಾರ್ಯದರ್ಶಿ, ನವ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು – 575010 ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಇದನ್ನೂ ಓದಿ: ಕಾಸ್ಮೋಸ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ



















