ಬೆಂಗಳೂರು : ತುರ್ತು ಸಂದರ್ಭಗಳಲ್ಲಿ, ಹಣ ಇಲ್ಲದಿದ್ದಾಗ ತುರ್ತು ಶಾಪಿಂಗ್ ಮಾಡಬೇಕಾದರೆ, ಏನನ್ನಾದರೂ ಖರೀದಿಸಬೇಕಾದರೆ ಕ್ರೆಡಿಟ್ ಕಾರ್ಡ್ ನೆರವಿಗೆ ಬರುತ್ತದೆ. ಇದಕ್ಕೆ ರಿವಾರ್ಡ್ ಪಾಯಿಂಟ್ ಗಳೂ ಸಿಗುತ್ತವೆ. ಅಷ್ಟೇ ಅಲ್ಲ, ರುಪೇ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗೆ ಈಗ ಹೊಸ ಆಫರ್, ಡಿಸ್ಕೌಂಟ್ ಗಳೂ ಸಿಗುತ್ತವೆ. ಕ್ರೆಡಿಟ್ ಕಾರ್ಡ್ ಗಳನ್ನು ಸದ್ಬಳಕೆ ಮಾಡಿಕೊಳ್ಳುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಹೌದು, ಯಾವುದೇ ಬ್ಯಾಂಕಿನ ರುಪೇ ಕ್ರೆಡಿಟ್ ಕಾರ್ಡ್ ಹೊಂದಿದವರು ಆಫರ್ ಲಾಭ ಪಡೆಯಬಹುದು. ಕಾರ್ಡ್ ಹೊಂದಿದವರು ಮೊದಲು ಕ್ರೆಡಿಟ್ ಕಾರ್ಡ್ ಅನ್ನು ಫೋನ್ ಪೇ, ಗೂಗಲ್ ಪೇ ಸೇರಿ ಯಾವುದೇ ಆ್ಯಪ್ ಗಳಿಗೆ ಲಿಂಕ್ ಮಾಡಬೇಕು. ಯುಪಿಐ ಮೂಲಕ ಪಾವತಿಸುವಾಗ ಕ್ರೆಡಿಟ್ ಕಾರ್ಡ್ ನಿಂದಲೇ ಪಾವತಿ ಮಾಡಬೇಕು. ಆಗ ಡಿಸ್ಕೌಂಟ್ ಲಾಭವನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ಪೂರ್ತಿ ಹಣ ಪಾವತಿಸಿದ ಬಳಿಕ ಕ್ಯಾಶ್ ಬ್ಯಾಕ್ ದೊರೆಯುತ್ತದೆ. ಆದರೆ, ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಕ್ಯಾಶ್ ಬ್ಯಾಕ್ ಹಣ ಕಡಿತವಾಗಿಯೇ ಬಿಲ್ ಮೊತ್ತವನ್ನು ಪಾವತಿಸಬಹುದಾಗಿದೆ.
ಉದಾಹರಣೆಗೆ, ನೀವು ಕ್ರೋಮಾದಲ್ಲಿ ಶಾಪಿಂಗ್ ಮಾಡಿದರೆ, ಅಲ್ಲಿ ನಿಮ್ಮ ಖರೀದಿಯ ಮೇಲೆ 2 ಸಾವಿರ ರೂಪಾಯಿವರೆಗೆ ರಿಯಾಯಿತಿ ಸಿಗಲಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ಗಳಂತಹ ಪ್ರಮುಖ ಶಾಪಿಂಗ್ ಆ್ಯಯಪ್ ಗಳಲ್ಲಿ ಶೇ.5ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಇದಿಷ್ಟೇ ಅಲ್ಲ, ದೊಡ್ಡ ಮೊತ್ತದ ಖರೀದಿಗಳಿಗೆ 6 ತಿಂಗಳವರೆಗೆ ಬಡ್ಡಿರಹಿತ ಇಎಂಐ (ನೋ ಕಾಸ್ಟ್ ಇಎಂಐ) ಸೌಲಭ್ಯವೂ ದೊರಕಲಿದೆ.
ದೇಶದಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಿಸುವುದು ಹಾಗೂ ಡಿಜಿಟಲ್ ಪೇಮೆಂಟ್ ಗಳಿಗೆ ಉತ್ತೇಜನ ನೀಡುವ ದಿಸೆಯಲ್ಲಿ ಕಂಪನಿಗಳು ಡಿಸ್ಕೌಂಟ್ ಹಾಗೂ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿವೆ ಎಂದು ತಿಳಿದುಬಂದಿದೆ. ಈಗ ಸಣ್ಣ ಅಂಗಡಿಗಳಲ್ಲೂ ಕ್ರೆಡಿಟ್ ಕಾರ್ಡ್ ಮೂಲಕ (UPI ಮೂಲಕ) ಪಾವತಿಸಲು ಸಾಧ್ಯವಾಗುತ್ತಿರುವ ಕಾರಣ ಇದರ ಲಾಭವನ್ನು ಪಡೆಯಬಹುದಾಗಿದೆ
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಪಾಳಯಕ್ಕೆ ಮಿಚೆಲ್ ಸ್ಟಾರ್ಕ್ ಎಂಟ್ರಿ!


















