ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಸೌತ್ ಸಿಟಿ ಕಾರ್ಪೊರೇಷನ್‌ನಲ್ಲಿ ಖಾಲಿ ಇರುವ 1,745 ಹುದ್ದೆಗಳ ನೇಮಕಾತಿಗಾಗಿ (Bengaluru Central City Corporation Recruitment 2026) ಅಧಿಸೂಚನೆ ಹೊರಡಿಸಲಾಗಿದೆ. 1,745 ಗಣತಿದಾರರ (Census Taker/ Census Enumerator) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇಂದೇ ಸಂದರ್ಶನಕ್ಕೆ ಹಾಜರಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಬೆಂಗಳೂರು ಸೌತ್ ಸಿಟಿ ಕಾರ್ಪೊರೇಷನ್
ಹುದ್ದೆ ಹೆಸರು: ಗಣತಿದಾರ
ಒಟ್ಟು ಹುದ್ದೆ: 1,745
ಉದ್ಯೋಗ ಸ್ಥಳ: ಬೆಂಗಳೂರು
ಸಂದರ್ಶನದ ದಿನಾಂಕ: ಏಪ್ರಿಲ್ 23
ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಪಿಯುಸಿ ಪೂರ್ಣಗೊಳಿಸಿರಬೇಕು. ನೇಮಕಾತಿ ಹೊಂದಿದವರಿಗೆ ಮಾಸಿಕ 16 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಯು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಲ್ಲಿ ಒಂದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ bbmp.gov.in ಗೆ ಭೇಟಿ ನೀಡಬೇಕು. ನಿಗದಿತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಗಳಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳಗಳ ಮಾಹಿತಿ
ಬೊಮ್ಮನಹಳ್ಳಿ ವಲಯ, ವಿಳಾಸ: ಜಂಟಿ ಆಯುಕ್ತರ ಕಚೇರಿ, ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಬೇಗೂರು, ಬೊಮ್ಮನಹಳ್ಳಿ ರಸ್ತೆ, ಸಿಎಂಸಿ (CMC) ಕಟ್ಟಡ, ಬೆಂಗಳೂರು. ಜಂಟಿ ಆಯುಕ್ತರ (Joint Commissioner) ಮೊಬೈಲ್ ಸಂಖ್ಯೆ: 8762716711. ಉಪ ಆಯುಕ್ತರ (Deputy Commissioner) ಮೊಬೈಲ್ ಸಂಖ್ಯೆ: 9480684353
ಎನ್.ಎಂ.ಕೆ.ಆರ್.ವಿ ಕಾಲೇಜು
ವಿಳಾಸ: ಜಯನಗರ, 3ನೇ ಬ್ಲಾಕ್, ಬೆಂಗಳೂರು. ಜಂಟಿ ಆಯುಕ್ತರ ಮೊಬೈಲ್ ಸಂಖ್ಯೆ: 9481492649. ಉಪ ಆಯುಕ್ತರ ಮೊಬೈಲ್ ಸಂಖ್ಯೆ: 9916536036
ಇದನ್ನೂ ಓದಿ : ಪಾರಿವಾಳದ ವಿಚಾರಕ್ಕೆ ಗಲಾಟೆ – ಚಾಕು ಇರಿದು ಯುವಕನ ಹತ್ಯೆ!



















