ವಿಜಯನಗರ : ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಐದಾರು ಮಂದಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಬೆಳ್ಳುಳ್ಳಿ ಸಾಗಾಟ ಮಾಡುತ್ತಿದ್ದ ಲಾರಿ ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಬೈಕ್, ಕಾರು ಹಾಗೂ ಬಸ್‌ಗೆ ಹೊಡೆದುಕೊಂಡು ಹೋಗಿದೆ. ಸದ್ಯಕ್ಕೆ ನಾಲ್ಕು ಜನರು ಸಾವನ್ನಪ್ಪಿರು ಬಗ್ಗೆ ಮಾಹಿತಿ ಲಭಿಸಿದೆ. ಅಪಘಾತದ ರಭಸಕ್ಕೆ ಒಂದು ಕಾರು ಅಪ್ಪಚ್ಚಿಯಾಗಿದೆ.
ಘಟನಾ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಎಸ್ ಹಾಗೂ ಮರಿಯಮ್ಮನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಕೆಲವರಿಗೂ ಗಾಯಗಳಾಗಿವೆ. ಗಾಯಾಳುಗಳೆಲ್ಲರನ್ನೂ ಹೊಸಪೇಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಪತಿ ಜತೆ ಅಕ್ರಮ ಸಂಬಂಧದ ಶಂಕೆ : ಪತಿಯ ಕಚೇರಿ ಸಿಬ್ಬಂದಿಯನ್ನು ಬರ್ಬರವಾಗಿ ಕೊಂದ ವಕೀಲನ ಪತ್ನಿ!



















