ವಿಜಯನಗರ: ಮಾಜಿ ಸಚಿವ ಆನಂದ್ ಸಿಂಗ್ ತಮ್ಮ ಸಹೋದರಿ ವಿರುದ್ಧವೇ ಸಮರ ಸಾರಿದ್ದಾರೆ. ವಿಜಯನಗರದಲ್ಲಿ ಆನಂದ್ ಸಿಂಗ್ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರಾಣಿ ಸಂಯುಕ್ತ ನಡುವೆ ಕದನ ಏರ್ಪಟ್ಟಿದೆ. ರಾಣಿ ಸಂಯುಕ್ತಗೆ ಟಿಕೆಟ್ ಕೊಟ್ಟರೆ ನಾನೇ ಎದುರಾಳಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ಗವಿಯಪ್ಪಗೆ ಟಿಕೆಟ್ ಕೊಟ್ಟರೆ ಸುಲಭವಾಗಿ ಗೆಲ್ಲುತ್ತೇವೆ. ಬಿಜೆಪಿ ಕಾರ್ಯಕರ್ತರೇ ನಿಂತರೂ ಸುಲಭ ಗೆಲುವು ಸಿಗಲಿದೆ. ಆದರೆ ರಾಣಿ ಸಂಯುಕ್ತ ನಿಂತರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.



















