ಚಿಕ್ಕಮಗಳೂರು : ವಿದ್ಯುತ್ ಬಿಲ್ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ಧಾರೆ. “ಇವರು ಇನ್ನೂ ಏನು ಉಳಿಸಿದ್ದಾರೆ ಹೇಳಿ, ಗಾಳಿಯ ಮೇಲೂ ತೆರಿಗೆ ಹಾಕಿದರೂ ಆಶ್ಚರ್ಯವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಸ್ಟಾಂಪ್ ಪೇಪರ್, ನೀರು, ಕಸದ ಮೇಲೆ ಈಗಾಗಲೇ ತೆರಿಗೆ ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮೇಲೂ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಜನರ ಮೇಲೆ ನಿರಂತರ ಹೊರೆ ಹಾಕಲಾಗುತ್ತಿದೆ ಎಂದು ಟೀಕಿಸಿದ್ದಾರೆ.
“ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ, ಗಾಳಿಯ ಮೇಲೂ ತೆರಿಗೆ ಹಾಕಿದರೆ ಜಾಗತಿಕ ದಾಖಲೆ ಆಗುತ್ತದೆ” ಎಂದು ವ್ಯಂಗ್ಯವಾಡಿದ ಸಿ.ಟಿ ರವಿ, ಇಂತಹ ನಿರ್ಧಾರಗಳನ್ನು ಜಗತ್ತಿನ ಸರ್ವಾಧಿಕಾರಿಗಳೂ ತೆಗೆದುಕೊಂಡಿಲ್ಲ,ಸರ್ಕಾರದ ದರ ಏರಿಕೆ ನೀತಿಗೆ ಜನರು ಬೇಸತ್ತಿದ್ದಾರೆ, ಈ ರೀತಿಯ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಧಗಧಗ ಹೊತ್ತಿ ಉರಿದ ಕಾರು!



















