ಬೆಂಗಳೂರು : ನಾಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್‌ಜೈಂಟ್ಸ್ ತಂಡಗಳ ನಡುವೆ ಹೈವೋಲ್ಟೇಜ್ ಐಪಿಎಲ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
ಪಂದ್ಯದ ವೇಳೆ ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಬ್ಲ್ಯಾಕ್ ಟಿಕೆಟ್ ಮಾರುವವರ ವಿರುದ್ಧ 7 ತಂಡಗಳ ರಚನೆ ಮಾಡಲಾಗಿದ್ದು, ಟಿಕೆಟ್ ಇಲ್ಲದೇ ಕ್ರೀಡಾಂಗಣದ ಬಳಿ ಅನಗತ್ಯವಾಗಿ ಗುಂಪು ಸೇರುವವರು, ಮೊಬೈಲ್ ಫೋನ್, ಪರ್ಸ್, ಚಿನ್ನಾಭರಣಗಳ ಕಳವು ಮಾಡುವವರ ಮೇಲೆ ನಿಗಾವಹಿಸಲಿದ್ದಾರೆ. ಐಪಿಎಲ್ ಮ್ಯಾಚ್‌ಗೆ ಬರುವವರಿಗೆ ರಾತ್ರಿ ಎರಡು ಗಂಟೆ ತನಕ ಮೆಟ್ರೋ ಮತ್ತು ಬಿಎಂಟಿಸಿ ವ್ಯವಸ್ಥೆ ಮಾಡಲಾಗಿದೆ.
ವಾಹನಗಳ ನಿಲುಗಡೆ ನಿಷೇಧವಿರುವ ರಸ್ತೆಗಳು:
ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು
* ಕ್ವೀನ್ಸ್ ರಸ್ತೆ – ಬಾಲೇಕುಂದ್ರಿ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್ ಹಾಗೂ CTO ಜಂಕ್ಷನ್ ವರೆಗೆ
* ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್ ವರೆಗೆ
* ಲಿಂಕ್ ರಸ್ತೆ – ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆ ವರೆಗೆ
* ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ
* ಸೆಂಟ್ರಲ್ ಸ್ಟ್ರೀಟ್ ರಸ್ತೆ ಎರಡೂ ಬದಿಯಲ್ಲಿ
* ಕಬ್ಬನ್ ರಸ್ತೆ – CTO ಸರ್ಕಲ್‌ನಿಂದ ಡಿಕ್ಕನ್ಸನ್ ರಸ್ತೆ ಜಂಕ್ಷನ್ ವರೆಗೆ
* ಕಾಮರಾಜ್ ರಸ್ತೆ ಜಂಕ್ಷನ್‌ನಿಂದ ಡಿಕ್ಕನ್ಸನ್ ರಸ್ತೆ ಜಂಕ್ಷನ್ ವರೆಗೆ (BMTC ಬಸ್ ಹೊರತುಪಡಿಸಿ ಇತರೆ ವಾಹನಗಳಿಗೆ ನಿಲುಗಡೆ ಇಲ್ಲ)
* ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ಸರ್ಕಲ್ ವರೆಗೆ
* ಮ್ಯೂಸಿಯಂ ರಸ್ತೆ – ಎಂ.ಜಿ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಆಶೀರ್ವಾದಂ ಸರ್ಕಲ್ ವರೆಗೆ
* ಕಸ್ತೂರಬಾ ರಸ್ತೆ – ಕ್ವೀನ್ಸ್ ಸರ್ಕಲ್‌ನಿಂದ ಹಡ್ಸನ್ ಸರ್ಕಲ್ ವರೆಗೆ
* ಮಲ್ಯ ಆಸ್ಪತ್ರೆ ರಸ್ತೆ – ಸಿದ್ದಲಿಂಗಯ್ಯ ಸರ್ಕಲ್‌ನಿಂದ ಆರ್.ಆರ್.ಎಂ ಸರ್ಕಲ್ ವರೆಗೆ
* ಕಬ್ಬನ್ ಪಾರ್ಕ್ ಒಳಗೆ – ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ್, ಫೌಂಟೇನ್ ರಸ್ತೆ
* ಲವೆಲ್ ರಸ್ತೆ – ಕ್ವೀನ್ಸ್ ಸರ್ಕಲ್‌ನಿಂದ ವಿಟ್ಟಲ್ ಮಲ್ಯ ರಸ್ತೆ ಜಂಕ್ಷನ್ ವರೆಗೆ
* ವಿಟ್ಟಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ಸರ್ಕಲ್‌ನಿಂದ ಬಿಷಪ್ ಕಾಟನ್ ಗರ್ಲ್ಸ್ ಶಾಲೆ ವರೆಗೆ
ಓಲಾ/ಉಬರ್/ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳು
* BRV ಗ್ರೌಂಡ್ – ಗೇಟ್ ನಂ. 06 ಬಳಿ
* ಮಾಣಿಕ್ ಶಾ ಪೆರೇಡ್ ಗ್ರೌಂಡ್ – ಗೇಟ್ ನಂ. 03 ಬಳಿ ಅವಕಾಶ ನೀಡಲಾಗಿದೆ.
ಪಾರ್ಕಿಂಗ್‌ಗೆ ಎಲ್ಲೆಲ್ಲಿ ಅವಕಾಶ?
* ಸೇಂಟ್ ಜೋಸೆಫ್, ಇಂಡಿಯನ್ ಹೈಸ್ಕೂಲ್ ಮೈದಾನ
* ಸೇಂಟ್ ಜೋಸೆಫ್ ಯೂರೋಪಿಯನ್ ಶಾಲೆ ಮೈದಾನ
* ಫ್ರೀಡಂ ಪಾರ್ಕ್ (MLCP ಪಾರ್ಕಿಂಗ್)
* ಗರುಡಮಾಲ್ ಪಾರ್ಕಿಂಗ್
* ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)
* ಯು.ಬಿ ಸಿಟಿ ಪಾರ್ಕಿಂಗ್
* ಕಂಠೀರವ ಕ್ರೀಡಾಂಗಣ (ಹೊಸದಾಗಿ ಪಾರ್ಕಿಂಗ್‌ಗೆ ಸೇರ್ಪಡೆ)
ಇದನ್ನೂ ಓದಿ : ಮ್ಯೂಸಿಕ್ ಇವೆಂಟ್‌ನಲ್ಲಿ ಡ್ರಗ್ ಓವರ್‌ಡೋಸ್‌ನಿಂದ ಇಬ್ಬರು ವಿದ್ಯಾರ್ಥಿಗಳ ಸಾವು – ಐವರ ಬಂಧನ!



















