ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪ ರಾತ್ರಿ ವೇಳೆ ಕರಡಿ ಜೀಪಲ್ಲಿ ಸಂಚರಿಸುತ್ತಿದ್ದವರಿಗೆ ಅಡ್ಡ ಸಿಕ್ಕಿರುವ ಘಟನೆ ನಡೆದಿದೆ.
ಭದ್ರಾ ಅಭಯಾರಣ್ಯ ಸಮೀಪವಿರುವ ಕೆಮ್ಮಣ್ಣುಗುಂಡಿಗೆ ತೆರಳುತ್ತಿದ್ದ ಜೀಪ್ ಮುಂದೆ ಅಚಾನಕ್ ಕರಡಿ ಅಡ್ಡ ಬಂದಿದ್ದು,ಕಬ್ಬಿಣದ ಗ್ರಿಲ್ಸ್ ದಾಟಲು ಮುಂದಾಗುತ್ತಿತ್ತು ಬಳಿಕ ಜೀಪ್‌ನ ಹೆಡ್‌ಲೈಟ್ ಕಾಣುತ್ತಿದ್ದಂತೆಯೇ ರಸ್ತೆಯಲ್ಲಿ ಓಡಲಾರಂಭೀಸಿದೆ ಎನ್ನಲಾಗಿದೆ.
ಪರಿಸ್ಥಿತಿಯನ್ನು ಗಮನಿಸಿದ ಜೀಪ್ ಚಾಲಕ ಕೆಲಕಾಲ ವಾಹನವನ್ನು ನಿಲ್ಲಿಸಿ, ಕರಡಿ ಅರಣ್ಯ ಪ್ರದೇಶದತ್ತ ತೆರಳುವವರೆಗೆ ಕಾಯ್ದಿದ್ದಾರೆ. ನಂತರ ಕರಡಿ ಅರಣ್ಯಕ್ಕೆ ಹಿಂತಿರುಗಿದ ಬಳಿಕ ತನ್ನ ಪ್ರಯಾಣ ಮುಂದುವರಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ : ಬೆಕ್ಕು ಮರಿ ಹಾಕಿದ್ದಕ್ಕೆ ಮಾಲೀಕರ ನಡುವೆ ಫೈಟ್!



















