ರಾಯಚೂರು : ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದುವರೆದಿದ್ದು. ಅಡುಗೆ ಅನಿಲ ಲೋಡ್ ಬರುವ ನಿರೀಕ್ಷೆಯಲ್ಲಿ 6 ಗಂಟೆ ಗಂಟೆಗಳ ಕಾಲ ಗ್ರಾಹಕರು. ಕಾದು ನಿಂತಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕಂಡು ಬಂದಿದೆ.
ಸಿಲೆಂಡರ್ ಕೊರತೆ ಹಿನ್ನೆಲೆ ಆತಂಕದಲ್ಲಿರುವ ಗ್ರಾಮಸ್ಥರು. ಮಸ್ಕಿ ಪಟ್ಟಣದ ಗ್ಯಾಸ್ ಗೋಡೌನ್ ಮುಂದೆ ಜಮಾವಣೆಗೊಂಡಿದ್ದರು. ಮಹಿಳೆಯರು, ಮಕ್ಕಳು, ಅಂಗವಿಕಲರು ಸಹ ಸಾಲಿನಲ್ಲಿ ಕಾದು ಕುಳಿತಿದ್ದರು.
ವಾಹನ ಬರುವಷ್ಟರಲ್ಲಿ ಸಿಲೆಂಡರ್ ಪಡೆಯಲು ಹರಸಾಹಸ ಪಡ್ಡ ಜನರು ಗೋದಾಮಿಗೆ ಲೋಡ್ ಬಂದ ತಕ್ಷಣ ಸಿಲಿಂಡರ್ ಪಡೆಯಲು ಮುಗಿಬಿದ್ದರು. ಗ್ಯಾಸ್ ವಿತರಣೆಯಲ್ಲಿ ವಿಳಂಬವಾಗಿದಕ್ಕೆ ಸಾರ್ವಜನಿಕರ ಅಧಿಕಾರಿಗಲ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣ ಸರಬರಾಜು ಹೆಚ್ಚಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜಗಳ ಬಿಡಿಸಲು ಹೋದ ಗರ್ಭಿಣಿ ಮೇಲೆ ಹಲ್ಲೆ – ಹೊಟ್ಟೆಯಲ್ಲಿದ್ದ ಅವಳಿ ಶಿಶುಗಳು ಸಾವು



















