ಮೈಸೂರು : ಮಾತು ಬಾರದ ಕಿವಿ ಕೇಳದ ವ್ಯಕ್ತಿಗಳಿಂದಲೇ ಕೊಲೆ ಮಾಡಿದ್ದು, ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ತುಮಕೂರು ಮೂಲದ ಶ್ರೀನಿವಾಸ್, ಗಂಗಾಧರ್ ಬಂಧಿತ ಆರೋಪಿಗಳು. ನಂಜನಗೂಡಿನ ದೇವಿರಮ್ಮನಹಳ್ಳಿ ಗ್ರಾಮದ ಸ್ವಾಮಿ (32) ಕೊಲೆಯಾದ ವ್ಯಕ್ತಿ ನಾಪತ್ತೆ ಕೇಸ್ ಬೆನ್ನತ್ತ ಪೊಲೀಸರಿಗೆ ಸಿಕ್ಕಿದ್ದು, ಶವ. ಇದನ್ನು ಬೇದಿಸಿದಾಗ ಇಬ್ಬರು ಆರೋಪಿಗಳು ಸೆರೆಯಾಗಿದೆ.
ಏನಿದು ಘಟನೆ
ಮಾರ್ಚ್ 4ರಂದು ನನ್ನ ಪತಿ ಕಾಣೆಯಾಗಿದ್ದಾರೆ ಎಂದು ನಂಜನಗೂಡಿನಲ್ಲಿ ಪತ್ನಿ ಸವಿತಾ ದೂರನ್ನು ನೀಡುತ್ತಾಳೆ. ಸವಿತಾ ಕೂಡ ಮಾತು ಬಾರದ ಕಿವಿ ಕೇಳದ ಮಹಿಳೆ ಆಗಿದ್ದಳು. ಸವಿತಾ ಜೊತೆ ವಿಡಿಯೋ ಕಾಲ್ ಸಂಪರ್ಕದಲ್ಲಿದ್ದ ಆರೋಪಿ ಶ್ರೀನಿವಾಸ್ ಹಣ ಸಹಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೇ ಸವಿತಾ ಪತಿ ಸ್ವಾಮಿಗೂ ಹಣಕಾಸು ಸಹಾಯ ಮಾಡಿದ್ದ ಎನ್ನಲಾಗಿದೆ. ಸ್ವಾಮಿ ಕೊಲೆ ಮಾಡಿದ್ರೆ ಸವಿತಾ ಜೊತೆ ನಾನು ಮದುವೆ ಆಗಬಹುದು ಎಂದು ಯೋಜನೆ ರೂಪಿಸಲಾಗಿದ್ದು, ಹಣ ಕೊಡುವುದಾಗಿ ಸ್ವಾಮಿಯನ್ನು ಫೆ. 12ರಂದು ಕುಣಿಗಲ್ ತಾಲೂಕಿನ ಅಮೃತ್ತೂರಿಗೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಯೋಗೇಶ್ ಗೌಡ ಕೊಲೆ ಕೇಸ್ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಇಂದು ಬಿಗ್ ಡೇ


















