ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಿಜಿಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಿನಿಮೀಯ ರೀತಿಯಲ್ಲಿ ಕಾರು ಸ್ಕಿಡ್ ಆದ ಘಟನೆ ಬೆಳಕಿಗೆ ಬಳದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಕಾರಿನಲ್ಲಿ ಇದ್ದ ನಾಲ್ವರು ಪ್ರಯಾಣಿಕರು ಪವಾಡದಂತೆ ಪಾರಾಗಿದ್ದಾರೆ.
ಘಟನೆ ಆಂದ್ರ ರಾಜ್ಯದ ಗುತ್ತಿ ಮೂಲದ ಬ್ಯಾಂಕ್ ಉದ್ಯೋಗಿ ಕುಟುಂಬದವರು ಕಾರಿನಲ್ಲಿದ್ದರೆಂದು ತಿಳಿದುಬಂದಿದೆ, ಗುತ್ತಿಯಿಂದ ಶಿವಮೊಗ್ಗ ಕಡೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕಾರು ಪಲ್ಟಿಯಾದ ಪರಿಣಾಮ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದಿದೆ. ಸ್ಥಳಕ್ಕೆ ಮೊಳಕಾಲ್ಮೂರು ಠಾಣಾ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಅಧಿಕಾರಿಗಳ ಅಸಡ್ಡೆಯಿಂದ ಕುಡಿಯುವ ನೀರಿನ ಘಟಕ ಬಂದ್!


















