ಕೊಪ್ಪಳ: ಮದುವೆ ಸಂಭ್ರಮದ ನಡುವೆ ಐಪಿಎಲ್ ಹುರುಪು ಕೂಡ ಸೇರ್ಪಡೆಯಾದ ವಿಶೇಷ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ. ಇಲ್ಲಿನ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಕ್ರಮದ ವೇಳೆ ಆರ್‌ಸಿಬಿ vs ಸಿಎಸ್‌ಕೆ ಪಂದ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಸಂಜೆ ನಡೆದ ಎಂಗೇಜ್ಮೆಂಟ್ ಕಾರ್ಯಕ್ರಮದ ಸಂದರ್ಭದಲ್ಲೇ ದೊಡ್ಡ ಪರದೆಯ ಮೇಲೆ ಪಂದ್ಯ ಪ್ರದರ್ಶನ ಮಾಡಲಾಗಿದ್ದು, ಮದುವೆಗೆ ಆಗಮಿಸಿದ್ದ ಆರ್‌ಸಿಬಿ ಅಭಿಮಾನಿಗಳು ಉತ್ಸಾಹದಿಂದ ಪಂದ್ಯ ವೀಕ್ಷಿಸಿದ್ದಾರೆ. ಸಿಎಸ್‌ಕೆ ವಿರುದ್ಧ ನಡೆದ ಈ ರೋಚಕ ಕದನವು ಮದುವೆ ಮನೆಯಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಿಸಿದೆ.
ಮದುವೆ ಸಂಭ್ರಮದ ಜೊತೆಗೆ ಕ್ರಿಕೆಟ್ ಹಬ್ಬವೂ ಸೇರಿ, ಅತಿಥಿಗಳು ಎರಡನ್ನೂ ಒಂದೇ ವೇಳೆ ಆನಂದಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ : ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಭುವನೇಶ್ವರ್ ಕುಮಾರ್; ಏನದು?


















