ಬೆಂಗಳೂರು : ಹೆಂಡತಿ ಕುತ್ತಿಗೆ ಮೇಲೆ ಗಂಡ ಕಾಲಿಟ್ಟು ತುಳಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ.
ಗಂಡ ಕರಿಯಪ್ಪನಿಂದ 34 ವರ್ಷದ ಕಾವ್ಯ ಕೊಲೆಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಮೂಲದವರಾಗಿದ್ದ ಆರೋಪಿ ಕರಿಯಪ್ಪ, ನಗರದಲ್ಲಿ ಕಂಟ್ರಾಕ್ಟರ್ ಕೆಲಸ ಮಾಡಿಕೊಂಡಿದ್ದರು. ಮೃತ ಕಾವ್ಯ ಮತ್ತು ಕರಿಯಪ್ಪ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ದಂಪತಿ ಮಧ್ಯೆ ಯಾವಾಗಲೂ ಆಸ್ತಿ ಮತ್ತು ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಹೀಗೆ ಹಣಕಾಸಿನ ವಿಚಾರಕ್ಕೆ ಪತ್ನಿ ಹಾಗೂ ಗಂಡನ ನಡುವೆ ಒಂದು ವಾರದಿಂದ ಗಲಾಟೆ ಶುರುವಾಗಿತ್ತು. ನಿನ್ನೆ ಗಂಡ ಕರಿಯಪ್ಪ ಎರಡು ಲಕ್ಷ ಹಣವನ್ನು ಮನೆಯಲ್ಲಿ ತಂದು ಇಟ್ಟಿದ್ದನು, ಆ ಹಣವನ್ನು ತನ್ನ ಅಣ್ಣನಿಗೆ ಕೊಡೋದಾಗಿ ಮೃತ ಕಾವ್ಯ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಇವತ್ತು 12.30ಕ್ಕೆ ಮತ್ತೆ ಗಲಾಟೆಯಾಗಿದ್ದು, ಈ ವೇಳೆ ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಮೇಲೆ ಕಾಲಿಟ್ಟು ಗಂಡ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ‘ಕೈ’ ಮುಖಂಡ ಶವವಾಗಿ ಪತ್ತೆ!


















